ಕುಂದಗೋಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ ಸುಶೀಲಾ ಅವರು ತಾಲೂಕಿನ ಸಂಶಿ, ಪಶುಪತಿಹಾಳ, ಹರ್ಲಾಪುರ, ಮತ್ತು ಕಳಸಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಪಶುಪತಿಹಾಳಕ್ಕೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲೆ ಕಾಂಪೌಂಡನ್ನು ಪರಿಶೀಲಿಸಿದರು, ಹಾಗೂ ಶಾಲೆಯಲ್ಲಿ ಮಕ್ಕಳೊಂದಿಗೆ ಮಕ್ಕಳ ಜತೆಗೆ ಕೊರೊನ ಬಗ್ಗೆ ಮುಂಜಾಗ್ರತೆ, ಜಾಗೃತಿ ಮೂಡಿಸಿದರು.
ಕಳಸ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಶಿಕ್ಷಕರೊಂದಿಗೆ ಶಾಲೆಯ ಬಗ್ಗೆ ಹಾಗೂ ಲಸಿಕೆ ಪಡೆದ ಮಕ್ಕಳ ಅಂಕಿ ಸಂಖ್ಯೆ ಬಗ್ಗೆ ಮಾಹಿತಿಯನ್ನು ಪಡೆದು ಮಕ್ಕಳ ಬಿಸಿಯೂಟವನ್ನು ಪರಿಶೀಲಿಸಿದರು.
ಜಲಜೀವನ ಮಿಷನ್ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿಯವರ ಇತರ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Kshetra Samachara
20/01/2022 02:09 pm