ಧಾರವಾಡ: ಧಾರವಾಡ ಜಿಲ್ಲೆಗೆ ಕೋವಿಡ್ ರೋಗ ನಿರೋಧಕ ಲಸಿಕಾಕರಣಕ್ಕಾಗಿ ಸುಮಾರು 14,44,000 ಡೋಸ್ ನೀಡುವ ಗುರಿ ನಿಗದಿಪಡಿಸಲಾಗಿತ್ತು. ಜನೇವರಿ 16, 2021 ರಿಂದ ಡಿ.19 ರ ವರೆಗೆ ಮೊದಲ ಡೋಸ್‍ನ್ನು 14,15,052 ಜನರಿಗೆ ನೀಡಲಾಗಿದ್ದು, ಶೇ.98 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು 2ನೇ ಡೋಸ್‍ನ್ನು 10,23,851 ಜನರಿಗೆ ಲಸಿಕೆ ನೀಡಲಾಗಿದ್ದು, ಶೇ.71 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡದ ಗ್ರಾಮೀಣ ಪ್ರದೇಶದಲ್ಲಿ 1,93,375 ಜನರಿಗೆ, ಧಾರವಾಡ ನಗರದಲ್ಲಿ 2,42,172 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ ಧಾರವಾಡ ತಾಲೂಕಿನಲ್ಲಿ 4,42,701 ಜನರಿಗೆ ಮೊದಲ ಡೋಸ್, 3,45,398 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ.
ಹುಬ್ಬಳ್ಳಿಯ ಗ್ರಾಮೀಣ ತಾಲೂಕಿನಲ್ಲಿ 1,08,890 ಜನರಿಗೆ ಮತ್ತು ಹುಬ್ಬಳ್ಳಿಯ ನಗರ ತಾಲೂಕಿನಲ್ಲಿ 5,08,189 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ ಹುಬ್ಬಳ್ಳಿ 2 ತಾಲೂಕುಗಳು ಸೇರಿ 5,91,154 ಜನರಿಗೆ ಮೊದಲ ಡೋಸ್‍ನ್ನು ಮತ್ತು 4,44,287 ಜನರಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಕಲಘಟಗಿ ತಾಲೂಕಿನಲ್ಲಿ ಕೋವಿಡ್ ಲಸಿಕೆಯನ್ನು 1,20,386 ಜನರಿಗೆ ನೀಡುವ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 1,21,013 ಜನರಿಗೆ ಮೊದಲ ಡೋಸ್‍ನ್ನು ನೀಡಲಾಗಿದ್ದು ಮತ್ತು 2ನೇ ಡೋಸ್‍ನ್ನು 76,765 ಜನರಿಗೆ ನೀಡಲಾಗಿದೆ.
ಕುಂದಗೋಳ ತಾಲೂಕಿನಲ್ಲಿ ಕೋವಿಡ್ ಲಸಿಕೆಯನ್ನು 1,29,189 ಜನರಿಗೆ ನೀಡುವ ಗುರಿ ಹೊಂದಲಾಗಿತ್ತು ಇಲ್ಲಿಯವರೆಗೆ 1,25,890 ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, ಮತ್ತು 2ನೇ ಡೋಸ್‍ನ್ನು 74,050 ಜನರಿಗೆ ನೀಡಲಾಗಿದೆ.
ನವಲಗುಂದ ತಲೂಕಿನಲ್ಲಿ ಕೋವಿಡ್ ಲಸಿಕೆಯನ್ನು 1,41,799 ಜನರಿಗೆ ನೀಡುವ ಗುರಿ ಹೊಂದಲಾಗಿತ್ತು. ಅದರಲ್ಲಿ ಮೊದಲ ಡೋಸ್‍ನ್ನು 1,34,294 ಜನರಿಗೆ ನೀಡಲಾಗಿದ್ದು, ಮತ್ತು 2ನೇ ಡೋಸ್‍ನ್ನು 83,351 ಜನರಿಗೆ ನೀಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ 14,44,000 ಗುರಿ ಪೈಕಿ 14,15,052 ಜನರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿ ಶೇ.98 ರಷ್ಟು ಪ್ರಗತಿ ಸಾಧಿಸಲಾಗಿದೆ ಮತ್ತು 10,23,851 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಿ ಶೇ.71 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
20/12/2021 09:33 pm