ಧಾರವಾಡ: ಹೊಸ ವರ್ಷಾಚರಣೆ ಹಾಗೂ ಕೊರೊನಾ ಹೊಸ ಅಲೆ ಇರುವುದರಿಂದ ರಾಜ್ಯ ಸರ್ಕಾರ ಇಂದಿನಿಂದ ಜನೆವರಿ 2 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿದೆ.
ರಾತ್ರಿ 10 ರ ನಂತರ ಕರ್ಪ್ಯೂ ಇರುವುದರಿಂದ ಅದನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂಬುದರ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಮಗೆ ಮಾಹಿತಿ ಕಳಿಸಲಿದ್ದಾರೆ.
ಅದು ಬಂದ ನಂತರ ಧಾರವಾಡ ಜಿಲ್ಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆಯೇ ಜ.2ರ ವರೆಗೆ ಕರ್ಪ್ಯೂ ಜಾರಿ ಮಾಡಲಾಗುವುದು.
ಇನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಆದೇಶ ಪ್ರತಿ ಬಂದಿಲ್ಲ ಬಂದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಬ್ಲಿಕ್ ನೆಕ್ಸ್ಟ್ ಗೆ ದೂರವಾಣಿ ಮೂಲಕ ಹೇಳಿದರು.
Kshetra Samachara
23/12/2020 02:02 pm