ಕುಂದಗೋಳ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೆ ತಂದಿರೋ ಹತ್ತು ಹಲವು ನಿಯಮಗಳಲ್ಲಿ ಈ ಸರ್ಕಾರಿ ಇಲಾಖೆಗೆ ಆಗಮಿಸುವ ಜನರನ್ನ ಕೋವಿಡ್ ತಪಾಸಣೆಗೆ ಒಳಪಡಿಸುವುದು ಒಂದು ಕ್ರಮವಾಗಿದೆ.
ಆದ್ರೆ ಹೀಗೆ ಕೋವಿಡ್ ತಪಾಸಣೆಗೆಂದು ಸಾಲಿನಲ್ಲಿ ನಿಂತ ಜನರಿಂದಲೇ ಮತ್ತೆ ಕೋವಿಡ್ ಉಲ್ಬಣಿಸಿದರೇ ಸಂಶಯ ಪಡಬೇಕಾಗಿಲ್ಲ ಬಿಡಿ.
ಯಾಕಪ್ಪಾ ? ಅಂದ್ರಾ ಈ ಕುಂದಗೋಳ ತಾಲೂಕು ಕಚೇರಿಗೆ ಆಗಮಿಸುವ ಜನರಿಗೆ ನಿತ್ಯ ಕೋವಿಡ್ ತಪಾಸಣೆ ಮಾಡಲಾಗುತ್ತದೆ. ಹೀಗೆ ತಪಾಸಣೆಗೆಂದು ನಿಂತವರು ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಗೊಡವೆಯನ್ನೆ ಮರೆತಿದ್ದಾರೆ.
ಇನ್ನು ಕೋವಿಡ್ ತಪಾಸಣೆ ಮಾಡೋ ಸಿಬ್ಬಂದಿಗಳು ಅವರಿಗೆ ಶಿಸ್ತಿನ ಪಾಠ ಮಾಡುವುದನ್ನ ಬಿಟ್ಟು ಕೋವಿಡ್ ತಪಾಸಣೆ ಮಾತ್ರ ಮಾಡಿ ಗಪ್ ಚುಪ್ ಕುಳಿತುಕೊಳ್ಳುತ್ತಿದ್ದಾರೆ.
ಈ ವ್ಯವಸ್ಥೆ ಗಮನಿಸಿದರೇ ಸರ್ಕಾರಿ ಆಸ್ಪತ್ರೆಗೆ ಕೋವಿಡ್ ತಪಾಸಣೆ ಮಾಡಿದವರ ವರದಿ ಕೊಡಲೇಂದೆ ಈ ಕ್ರಮ ಕೈಗೊಂಡಿದ್ದು ಜನರ
ಶಿಸ್ತು ಸಾಮಾಜಿಕ ಅಂತರ ಮಾಸ್ಕ್ ಬಗ್ಗೆ ಅವರು ಚಕಾರ ಎತ್ತುತ್ತಿಲ್ಲ ಬದಲಾಗಿ ತಹಶೀಲ್ದಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮೌನವಾಗಿದ್ದಾರೆ ಎಂಬ ಜನರ ಟೀಕೆಗಳು ಕೇಳಿ ಬರುತ್ತಿವೆ.
Kshetra Samachara
21/12/2020 01:36 pm