ನವಲಗುಂದ : ಎಲ್ಲಿ ರೋಗಿಗಳಿಗೆ ಗುಣವಾಗುತ್ತೋ ಅಲ್ಲಿ ರೋಗಗಳಿಗೆ ಆಹ್ವಾನ ನೀಡುವ ದೃಶ್ಯಗಳು ಈಗ ನವಲಗುಂದ ಪಟ್ಟಣದ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಕಂಡು ಬರುತ್ತಿವೆ. ಯಾಕೆ ಅಂದ್ರೆ ಮನಸೋಇಚ್ಛೆ ತಿರುಗಾಡುತ್ತಿರುವ ಹಂದಿಗಳೇ ಇದಕ್ಕೆ ಕಾರಣ.
ಹೌದು ಸ್ವಚ್ಛತೆಗೆ ಮಾದರಿಯಾಗಬೇಕಿದ್ದ ಆಸ್ಪತ್ರೆಗಳ ಆವರಣದಲ್ಲೇ ಈ ರೀತಿ ಹಂದಿಗಳು ಬಿಂದಾಸ್ ಆಗಿ ತಿರುಗಾಡುತ್ತಿದ್ದರೆ,
ಇಲ್ಲಿಗೆ ಬರುವ ರೋಗಿಗಳ ಗತಿ ಏನು ಎಂಬುದು ಸಾರ್ವಜನಿಕರಲ್ಲಿ ಮುಡೋದಂತೂ ಖಚಿತ,
ಮೊದಲೇ ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ನವಲಗುಂದದ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆವರಣವೇ ಅವ್ಯವಸ್ಥೆಯಿಂದ ಕೂಡಿದ್ದರೆ ಹೇಗೆ,
ಸಂಬಂಧ ಪಟ್ಟ ಅಧಿಕಾರಿಗಳು ಈ ಹಂದಿಯ ಬಿಂದಾಸ್ ಓಡಾಟಕ್ಕೆ ಬ್ರೇಕ್ ಹಾಕಿ ಆಸ್ಪತ್ರೆಯಿಂದ ದೂರ ಅವುಗಳನ್ನು ಸಾಗಿಸಬೇಕಿದೆ.
Kshetra Samachara
17/12/2020 04:52 pm