ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ತಹಶೀಲ್ದಾರ ಕಚೇರಿಯಲ್ಲಿ ಕೋವಿಡ್ ಟೆಸ್ಟ್ ಹೊರಗಡೆ ರೂಲ್ಸ್ ಫೇಲ್

ಅಣ್ಣಿಗೇರಿ : ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಎಲ್ಲೇಡೆ ಸಾರ್ವಜನಿಕರಿಗೆ ಕೋವಿಡ್ ಟೆಸ್ಟ್ ಆರಂಭವಾಗಿದ್ದು ಪಟ್ಟಣದ ತಹಶೀಲ್ದಾರ ಕಚೇರಿಗೆ ಆಗಮಿಸುವ ಜನರಿಗೆ ಕೋವಿಡ್ ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು ಕೆಲ ಜನರೂ ಇದಕ್ಕೆ ಸಮ್ಮತಿಸಿದ್ರೇ ಇನ್ನೂ ಕೆಲವರು ನಮಗೇನ್ ಆಗಿಲ್ಲಾ ಬೀಡ್ರ ಎನ್ನುತ್ತಿದ್ದಾರೆ.

ಇನ್ನೂ ತಹಶೀಲ್ದಾರ ಕಚೇರಿಯಲ್ಲಿ ಆರಂಭವಾದ ಕೋವಿಡ್ ಟೆಸ್ಟ್ ಒಂದೇಡೆಯಾದ್ರೆ ಕಚೇರಿಗೆ ಬರೋ ಜನರು ಮಾಸ್ಕ್ , ಹಾಗೂ ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಕೂರುತ್ತಿದ್ದ ಸನ್ನಿವೇಶ ಕಂಡು ಬಂದಿದ್ದು ಕೋವಿಡ್ ಟೆಸ್ಟ್ ಬದಲಾಗಿ ಈ ವ್ಯವಸ್ಥೆ ಸರಿಪಡಿಸಿ ಕಚೇರಿಗೆ ಬಂದವರಿಗೆ ಕೂರಲು ನಿಲ್ಲಲು ಆಸನ ವ್ಯವಸ್ಥೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

15/10/2020 06:57 pm

Cinque Terre

25.61 K

Cinque Terre

3

ಸಂಬಂಧಿತ ಸುದ್ದಿ