ಕುಂದಗೋಳ : ಸರ್ಕಾರಿ ಶಾಲೆ ಆವರಣದಲಿ ಗಲಿ ಬಿಲಿ ಸದ್ದು, ಸತತ ಎರೆಡು ವರ್ಷ ಗೆಳೆಯ ಗೆಳತಿಯರನ್ನು ಕಾಣದೆ ಮೌನ ತಾಳಿದ್ದ ಮಕ್ಕಳ ಬಾಯಲ್ಲಿ ಪಟ ಪಟ ಮಾತು, ಗೆಳೆಯರ ಜೊತೆ ತುಂಟಾಟ ಅಬ್ಬಾ ! ಅಂತೂ ಇಂತೂ ಶಾಲೆ ಆರಂಭವಾಯ್ತು ಎನ್ನುವ ಉತ್ಸಾಹ.
ಇಂತಹ ದೃಶ್ಯಗಳು ಕಂಡು ಬಂದಿದ್ದು ಕುಂದಗೋಳ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ. ಕೊರೊನಾ ವೈರಸ್ ಆಟಾಟೋಪಕ್ಕೆ ಸಿಲುಕಿ ಬಾಗಿಲು ಹಾಕಿದ್ದ ಸರ್ಕಾರಿ ಶಾಲೆಗಳು ಆನ್ಲೈನ್ ಕ್ಲಾಸ್ ಮೂಲಕ ಮಕ್ಕಳಿಗೆ ಪಾಠ ಬೋಧನೆ ಮಾಡಿದ್ರೂ, ಇಂದಿನ ಆನಂದ ಅಂದು ತಂದಿರಲಿಲ್ಲ, ಈಗ ಹಂತ ಹಂತವಾಗಿ ಶಾಲೆ ಆರಂಭವಾಗುತ್ತಾ ಇಂದು ಒಂದನೇ ತರಗತಿಯಿಂದ ಎಲ್ಲಾ ತರಗತಿಗಳು ಪಾಠಕ್ಕೆ ತೆರದಂತಾಗಿದೆ.
ಈ ಖುಷಿ ಮಕ್ಕಳನ್ನು ಮತ್ತೋಂದು ಲೋಕಕ್ಕೆ ಕರೆದೊಯ್ದಿದ್ದು, ಶಾಲಾ ಆವರಣದಲ್ಲಿ ಹೊಸ ಕಳೆಯಲ್ಲಿ ಮಕ್ಕಳೆಲ್ಲಾ ಉತ್ಸಾಹದಿಂದ ಶಾಲೆ ಕಡೆ ಹೆಜ್ಜೆ ಹಾಕಿ ಪಾಠ ಕೇಳಲು ಆಸಕ್ತರಾಗಿದ್ದಾರೆ.
ಇನ್ನೂ ಮನೆಯಲ್ಲಿ ಅಕ್ಕ ಅಣ್ಣ ಶಾಲೆಗೆ ಹೋಗುವುದನ್ನು ಕಂಡು ಈ ಎಲ್.ಕೆ.ಜಿ ಮತ್ತು ಯು.ಕೆ ಜಿ ಅಂಗನವಾಡಿ ಮಕ್ಕಳು ತಾವು ಸಹ ಶಾಲೆಗೆ ಹೋಗಲು ಹವಣಿಸುತ್ತಾ ಪಾಲಕರನ್ನು ಬಿಡದೆ ಕಾಡಿ ಅಣ್ಣ ಅಕ್ಕನೊಡನೆ ಶಾಲೆಗೆ ಹೋಗಿ ಮರಳಿ ಪಾಲಕರ ಜೊತೆ ಮನೆ ಸೇರುತ್ತಿದ್ದಾರೆ.
ಒಟ್ಟಾರೆ ಕೊರೊನಾ ಲಾಕ್ ಡೌನ್ ಕಂಟಕ ಮುಗಿಸಿ ಮೊದಲಿನಂತೆ ಶಾಲೆಗಳು ಆರಂಭವಾಗಿರುವ ಖುಷಿಗೆ ಮತ್ತೇ ಮಹಾಮಾರಿ ಕೊರೊನಾ ಅಡ್ಡಿ ಮಾಡದಿರಲಿ ಎಂದು ಪಾರ್ಥಿಸುತ್ತಾ ಈ ಚಿಣ್ಣರ ಭವಿಷ್ಯಕ್ಕೆ ಶುಭಾಶಯ ತಿಳಿಸೋಣ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
25/10/2021 12:47 pm