ನರಗುಂದ: ಹಳೇ ದ್ವೇಷದ ಹಿನ್ನೆಲೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ದುಷ್ಕರ್ಮಿಗಳು ಇಬ್ಬರು ಯುವಕರಿಗೆ ಚೂರಿ ಇರಿದಿರುವ ಘಟನೆ ಗದಗ ಜಿ. ನರಗುಂದ ಪಟ್ಟಣದಲ್ಲಿ ನಡೆದಿದೆ.
ಶಮೀರ್ ಶಹಪೂರ ಹಾಗೂ ಶಮಶೇರ್ ಖಾನ್ ಅನ್ನೋ ಯುವಕರೇ ಚೂರಿ ಇರಿತಗೊಳಗಾದವರು. ಇಬ್ಬರು ಗಾಯಾಳುಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶಮೀರ ಶಹಪೂರ ಸಾವನ್ನಪ್ಪಿದ್ದಾನೆ.
ಇನ್ನೂ ಶಮೀರ ಶಹಪೂರ ಶವ ಸಂಸ್ಕಾರಕ್ಕೆ ಸಾವಿರಾರು ಜನ ಸೇರಿದ್ದು, ಕೋವಿಡ್ ನಿಯಮ ಉಲ್ಲಂಘನೆಯಾಗ್ತಿದ್ರೂ ಪೊಲೀಸ್ ಇಲಾಖೆ ನಿಷ್ಕ್ರೀಯವಾಗಿದೆ. ಮೃತದೇಹದ ಮೆರವಣಿಗೆಗೆ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿದ್ದು,ಕೊವೀಡ್ ನಿಯಮ ಮೀರಿ ಭಾಗಿಯಾಗಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
Kshetra Samachara
19/01/2022 03:52 pm