ಅಣ್ಣಿಗೇರಿ: ಮೂರು ದಿನಗಳ ಹಿಂದಷ್ಟೇ ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಇಲಾಖೆಯವರು ತಾಲೂಕಿನ ಭದ್ರಾಪುರ ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊರೋನಾ ಟೆಸ್ಟ್ ಮಾಡಿಸಿದ್ದರು. ಅದರಲ್ಲಿ 10 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ದಂಡಾಧಿಕಾರಿ ಮಂಜುನಾಥ ಅಮಾಸೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದ ಪ್ರಕಾರ ದಿನಾಂಕ 03-02-2022 ದಿಂದ 09-02-2022 ರವರಿಗೆ ರಜೆ ಘೋಷಿಸಲಾಗಿದೆ ಹಾಗೂ ಶಾಲೆಯನ್ನು ಸೀಲ್‌ಡೌನ್ ಮಾಡಲಾಗಿದೆ.
Kshetra Samachara
03/02/2022 08:15 pm