ಹುಬ್ಬಳ್ಳಿ: ಕೋವಿಡ್ ವರದಿಗೆ ಜನರ ಪರದಾಡುತ್ತಿರುವ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೇತ್ತುಕೊಂಡು ಕೋವಿಡ್ ವರದಿಯನ್ನು ಪಡೆಯುವ ಸರಳ ಮಾರ್ಗವನ್ನು ಜನರಿಗೆ ಒದಗಿಸಿದೆ.
ಹೌದು. ಕೋವಿಡ್ ತಪಾಸಣೆ ನಡೆಸಿ ಸುಮಾರು ದಿನಗಳ ಕಳೆದರೂ ವರದಿ ಮಾತ್ರ ಜನರ ಕೈ ಸೇರುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಜನರು ಆತಂಕಗೊಂಡಿದ್ದರು. ಅಲ್ಲದೆ ಸುಮಾರು ಜನರು ಪಬ್ಲಿಕ್ ನೆಕ್ಸ್ಟ್ ಗೆ ಕರೆ ಮಾಡಿ ದೂರು ನೀಡಿದ್ದರು. ಈ ಕುರಿತು ಪಬ್ಲಿಕ್ ನೆಕ್ಸ್ಟ್ "ಆರ್.ಟಿ.ಪಿ.ಸಿ.ಆರ್ ವರದಿಗೆ ಜನರ ಪರದಾಟ: ಸಕಾಲಕ್ಕೆ ಬಾರದೇ ಜನರಲ್ಲಿ ಆತಂಕ" ಎಂಬುವಂತ ವರದಿಯೊಂದನ್ನು ಬಿತ್ತರಿಸುವ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ವರದಿ ಪ್ರಸಾರಗೊಂಡ ಬೆನ್ನಲ್ಲೇ ಜಿಲ್ಲಾಡಳಿತ ಕೋವಿಡ್ ತಪಾಸಣೆ ವರದಿಯನ್ನು ಪಡೆಯಲು ಸರಳ ಮಾರ್ಗವನ್ನು ಜನರಿಗೆ ಒದಿಗಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ 19 ಆರ್ಟಿ ಪಿಸಿಆರ್ ಹಾಗೂ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ವರದಿಗಳಿಗಾಗಿ report.icmr.org.in ವೆಬ್ ಸೈಟ್ ಗೆ ಅಂತರ್ಜಾಲದ ಮೂಲಕ ಭೇಟಿ ನೀಡಬೇಕು . ಕೋವಿಡ್ 19 report portal ನಲ್ಲಿ ನೋಂದಾಯಿತ ಮೊಬೈಲ್ ನಂಬರ್ ದಾಖಲಿಸಬೇಕು. ಕೆಲವೇ ಸೆಕೆಂಡುಗಳಲ್ಲಿ ಮೊಬೈಲ್ ಗೆ ಒಟಿಪಿ ಬರುತ್ತದೆ. ಒಟಿಪಿ ದಾಖಲಿಸಿದ ನಂತರ verify & proceed ಲಿಂಕ್ ಕ್ಲಿಕ್ ಮಾಡಿದ ಕೂಡಲೇ ನಮೂದಿಸಿದ ಮೊಬೈಲ್ ಸಂಖ್ಯೆಯ ಮೂಲಕ ಪರೀಕ್ಷೆಗೊಳಪಟ್ಟ ಎಲ್ಲಾ ವ್ಯಕ್ತಿಗಳ ವಿವರ, ಕೋವಿಡ್ ತಪಾಸಣೆಗೆ ಸ್ವ್ಯಾಬ್ ಸಂಗ್ರಹಿಸಿದ ದಿನಾಂಕ, ಪರೀಕ್ಷೆ ದಿನಾಂಕ, ಪರಿಣಾಮ ಎಲ್ಲಾ ಮಾಹಿತಿ ಸಿಗುತ್ತವೆ. Action ಲಿಂಕ್ ಬಳಸಿ ಸುಲಭವಾಗಿ ವರದಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ರಾಜ್ಯ ಕೋವಿಡ್ ವಾರ್ ರೂಮಿನ covid.karanataka.gov.in ವೆಬ್ಸೈಟ್ ಮೂಲಕವು ಕೋವಿಡ್ ತಪಾಸಣಾ ವರದಿಗಳನ್ನು ಪಡೆಯಬಹುದು. ನೋಂದಾಯಿತ ಮೊಬೈಲ್ ನಂಬರ್ 13 ಅಂಕಿಗಳ ಎಸ್ಆರ್ಎಫ್ ಗುರುತು ಹಾಗೂ ಪರದೆಯಲ್ಲಿ ಕಾಣುವ ಕ್ಯಾಪ್ಚಾವನ್ನು ಸರಿಯಾಗಿ ದಾಖಲಿಸಿ ಕೋವಿಡ್ ತಪಾಸಣಾ ವರದಿಗಳನ್ನು ಜನರು ಪಡೆಯಬಹುದು. ಸ್ವ್ಯಾಬ್ ನೀಡುವಾಗ ನೊಂದಾಯಿಸಿದ ಮೊಬೈಲ್ ಸಂಖ್ಯೆಗೂ ಕೋವಿಡ್ ತಪಾಸಣಾ ವರದಿಯ ಮಾಹಿತಿ ಒಳಗೊಂಡ ಎಸ್ಎಂಎಸ್ ಕೂಡ ಕಳಿಸುವ ವ್ಯವಸ್ಥೆ ಇದೆ.
ಕೋವಿಡ್ ತಡೆಯಲು, ನಿಯಂತ್ರಿಸಲು ಪರೀಕ್ಷೆಗೆ ಒಳಪಡುವುದು ಅಗತ್ಯ. ಜಿಲ್ಲೆಯ ಜನ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Kshetra Samachara
14/01/2022 08:17 am