ಬೆಂಗಳೂರು: ನಗರದ ವಸಂತನಗರ ವಾರ್ಡ್ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಫಿಜಿಕಲ್ ಟ್ರಯಾಜ್ ಸೆಂಟರ್(PTC)ಗೆ ಮಾನ್ಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ನಿನ್ನೆ (ಮಂಗಳವಾರ) ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಫಿಜಿಕಲ್ ಟ್ರಯಾಜಿಂಗ್ ಸೆಂಟರ್‌ಗೆ ವಾಕ್-ಇನ್ ಮೂಲಕ ಬರುವವರಿಗೆ ಸರಿಯಾಗಿ ಭೌತಿಕ ಚಿಕಿತ್ಸೆ ನಡೆಸಿ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿರುವವರಿಗೆ ಮಾತ್ರ ಬೆಡ್ ಬ್ಲಾಕ್ ಮಾಡಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿ. ಆಸ್ಪತ್ರೆಗೆ ತೆರಳುವ ಅವಶ್ಯಕತೆ ಇಲ್ಲದಿರುವವರಿಗೆ ಮನೆಯಲ್ಲೇ ಐಸೋಲೇಟ್ ಆಗಲು ತಿಳಿಸಿ ಹಾಗೂ ಅವರಿಗೆ ಐಸೋಲೇಷನ್ ಕಿಟ್ ಕೊಡಿ. ಮನೆಯಲ್ಲಿ ಐಸೋಲೇಟ್ ಆಗಲು ಸ್ಥಳಾವಕಾಶ ಇಲ್ಲದ್ದಿದ್ದರೆ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳುಹಿಸಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡುವ, ಮೊಬೈಲ್ ಟೀಮ್ ಮೂಲಕ ಪರೀಕ್ಷೆ ಮಾಡುವ, ಲಸಿಕಾಕರಣ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.
ಈ ವೇಳೆ ವಲಯ ಜಂಟಿ ಆಯುಕ್ತರು ಶಿಲ್ಪಾ, ವಲಯ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
12/01/2022 09:41 am