ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಲ್ಕು ಲಕ್ಷದಷ್ಟು ಮಕ್ಕಳಿಗೆ ಕೊರೊನಾ ತಗುಲುವ ಭೀತಿ ಇದೆ

ಧಾರವಾಡ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ನಿಧಾನವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ನಾಲ್ಕು ಲಕ್ಷದಷ್ಟು ಮಕ್ಕಳು ಕೊರೊನಾ ಬಾಧಿತರಾಗಬಹುದು ಎಂಬ ಆತಂಕ ಎದುರಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಅಂಥೋನಿ ಹೇಳಿದರು.

ಧಾರವಾಡದ ವಾರ್ತಾಭವನ ಕಟ್ಟಡದ ನೆಲಮಹಡಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಲಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಮೂರನೇ ಅಲೆ ಸಂಬಂಧ ಈಗಾಗಲೇ ಆರೋಗ್ಯ ಇಲಾಖೆ ನಿರ್ದೇಶನಗಳನ್ನು ಕೊಟ್ಟಿದೆ. ಆ ಸಂಬಂಧ ಜಿಲ್ಲಾಮಟ್ಟದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ತಯಾರಿಗಳೂ ನಡೆದಿವೆ ಎಂದರು.

ಯಾವ ಹಂತದ ಮಕ್ಕಳಿಗೆ ಕೊರೊನಾ ಮೂರನೇ ಅಲೆ ತಗುಲಬಹುದು ಎಂಬುದರ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಅಂತಹ ಮಕ್ಕಳಿಗೆ ಕೊರೊನಾ ತಗುಲದಂತೆ ನೋಡಿಕೊಳ್ಳಲು ವಿವಿಧ ಸೌಲಭ್ಯಗಳು ಸಿಗಬೇಕು. ಔಷಧೋಪಚಾರದ ಸಿದ್ಧತೆಯೂ ಆಗಬೇಕು ಹಾಗೂ ವೈದ್ಯರೂ ಕೂಡ ತಯಾರಿ ಆಗಬೇಕು ಎಂದ ಅವರು, ಶಾಲೆ ಆರಂಭಕ್ಕೆ ಸರ್ಕಾರವೇ ನಿರ್ಧಾರ ತೆಗೆದುಕೊಂಡಿದ್ದು, ಶಾಲೆಗಳಲ್ಲಿ ಅಗತ್ಯ ಆರೋಗ್ಯ ಸೌಲಭ್ಯ ಮಾಡಬೇಕು ಎಂದರು.

Edited By : Nirmala Aralikatti
Kshetra Samachara

Kshetra Samachara

10/08/2021 12:35 pm

Cinque Terre

26.18 K

Cinque Terre

14

ಸಂಬಂಧಿತ ಸುದ್ದಿ