ಹುಬ್ಬಳ್ಳಿ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕನ್ ಮಾರಾಟಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಸದ್ಯ ವಿಶೇಷ ದಿನಗಳಲ್ಲಿಯು ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಕೋರಿ ಹುಬ್ಬಳ್ಳಿ ಮಹಾನಗರ ಚಿಕನ್ ವ್ಯಾಪಾರಸ್ಥರ ಸಂಘ ಮಾಜಿ ಮುಖ್ಯಮಂತ್ರಿ, ಜಗದೀಶ್ ಶೆಟ್ಟರ್ ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಹನೀಯರ ಪುಣ್ಯತಿಥಿ, ಜಯಂತ್ಯೋತ್ಸವ ದಿನಗಳಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರುವದರಿಂದ ವ್ಯಾಪಾರಸ್ಥರಿಗೆ ಕೋಳಿ ಸಾಕಾಣಿಕೆದಾರರಿಗೆ ಹಾಗೂ ಅವಲಂಭಿತ ಕೆಲಸಗಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚಿಕನ್ ಮಾರಾಟಗಾರರಿಗೆ ನ್ಯಾಯ ಒದಗಿಸುವಂತೆ ಸಿ ಸಂಘದ ಅಧ್ಯಕ್ಷ ಅಲ್ತಾಪ್ ಬೇಪಾರಿ ಹಾಗೂ ಸದಸ್ಯರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರ ಅಲ್ತಾಫ ಬೇಪಾರಿ, ನಾಗರಾಜ ಪಟ್ಟಣ, ಮಹ್ಮದ ಸೇರಿದಂತೆ ಮುಂತಾದವರಿದ್ದರು.
Kshetra Samachara
30/01/2022 05:24 pm