ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅವೈಜ್ಞಾನಿಕ ನೈಟ್ ಹಾಗೂ ವೀಕೆಂಡ್ ಕರ್ಫ್ಯೂನಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ

ಧಾರವಾಡ: ಅವೈಜ್ಞಾನಿಕ ವೀಕೆಂಡ್ ಕರ್ಫ್ಯೂ ನಮ್ಮ ಉದ್ಯಮದ ಮೇಲೆ ಬಹಳ ನಷ್ಟವನ್ನು ತಂದೊಡ್ಡಿದೆ. ಈ ನಷ್ಟವನ್ನು ಭರಿಸುವ ಶಕ್ತಿ ಹೋಟೆಲ್ ಉದ್ಯಮದಲ್ಲಿ ಉಳಿದಿಲ್ಲ. ಹೀಗಾಗಿ ಶನಿವಾರ ಮತ್ತು ಭಾನುವಾರ ಕೂತು ಊಟ ಮಾಡಲು ಅವಕಾಶ ಮಾಡಿಕೊಡುವಂತೆ ಹೋಟೆಲ್ ಒಡೆಯರ ಸಂಘದ ವತಿಯಿಂದ ಗುರುವಾರ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಹೌದು ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಹರಾಡುವಿಕೆ ಅಷ್ಟಿಲ್ಲದಿದ್ದರೂ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಹೆರಲಾಗಿರೋದು, ಹೋಟೆಲ್ ಉದ್ಯಮಕ್ಕೆ ನುಂಗಲಾರದ ತುತ್ತಗಿದೆ. ಇನ್ನು ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 1500 ರಿಂದ 1800 ಹೋಟೆಲ್ ಗಳು ಸೇರಿದಂತೆ ಹಲವು ಉದ್ಯಮಗಳ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನೈಟ್ ಹಾಗೂ ವೀಕೆಂಡ್ ಕರ್ಫ್ಯೂಯನ್ನು ರದ್ದುಗೊಳಿಸುವಂತೆ ಇಂದು ಧಾರವಾಡ ಜಿಲ್ಲಾಧಿಕಾರಿಗಳಿಗೆ ಹೋಟೆಲ್ ಒಡೆಯರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

13/01/2022 01:29 pm

Cinque Terre

31.49 K

Cinque Terre

4

ಸಂಬಂಧಿತ ಸುದ್ದಿ