ಧಾರವಾಡ: ಡಿಸೆಂಬರ್ 21ಕ್ಕೂ ಮುನ್ನ ಬ್ರಿಟನ್‌ನಿಂದ ಧಾರವಾಡ ಜಿಲ್ಲೆಗೆ ಐದು ಜನರು ಆಗಮಿಸಿದ್ದಾರೆ. ಹೀಗಾಗಿ ವೈದ್ಯಾಧಿಕಾರಿಗಳು ಆರ್‌ಟಿ ಪಿಸಿಆರ್ ಪರೀಕ್ಷೆಗೆ ಅವರ ಗಂಟಲು ದ್ರವವನ್ನು ಪಡೆದಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು, ಇಂದು ರಾತ್ರಿ ಅವರೆಲ್ಲರ ಕೊರೊನಾ ಟೆಸ್ಟ್ ವರದಿಯು ದೊರೆಯಲಿವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಐವರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
Kshetra Samachara
22/12/2020 06:39 pm