ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೋನಾ ಸೋಂಕಿಗೆ ಲಸಿಕೆ ಸಂಗ್ರಹಕ್ಕೆ ಜಿಲ್ಲಾಡಳಿತ ಸನ್ನದ್ಧ

ಹುಬ್ಬಳ್ಳಿ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯು ಗತಾಯು ಹೋರಾಟ ನಡೆಸಿ ಯಶಸ್ವಿ ಮಾರ್ಗದತ್ತ ಧಾರವಾಡ ಜಿಲ್ಲಾಡಳಿತ ಸಾಕಷ್ಟು ಜನಪರ ಸೇವೆಯನ್ನು ಮಾಡಿದ್ದು,ಈಗ ಮತ್ತೊಂದು ಚಿಂತನೆಯತ್ತ ದಾಪುಗಾಲು ಹಾಕುತ್ತಿದೆ.ಬಹುನಿರೀಕ್ಷಿತ ಕಾರ್ಯವೊಂದು ಸಾರ್ವಜನಿಕರಿಗೆ ಶೀಘ್ರವಾಗಿ ದೊರೆಯುತ್ತಿದ್ದು,ಇಂತಹ ಮಹತ್ವದ ಕಾರ್ಯಕ್ಕೆ ಜಿಲ್ಲಾಡಳಿತ ಸನ್ನದ್ಧವಾಗುತ್ತಿದೆ.ಏನಿದು ಕಾರ್ಯ ಅಂತೀರಾ ಈ ಸ್ಟೋರಿ ನೋಡಿ...

ಧಾರವಾಡ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿಗೆ ಲಸಿಕೆ ಸಂಗ್ರಹ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.ಈಗಾಗಲೇ ಕೋಲ್ಡ್‌ ಸ್ಟೋರೇಜ್‌’ ನಿರ್ಮಿಸಬೇಕಿದ್ದು, ಇದಕ್ಕಾಗಿ 5 ಲಕ್ಷ ಅನುದಾನ ಬಿಡುಗಡೆ ಮಾಡಬೇಕು ಎಂದು ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ಅವರು, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.ಈ ಕುರಿತು ಜಿಲ್ಲಾಡಳಿತದ ಜೊತೆಗೆ ಕೂಡ ಸಮಾಲೋಚನೆ ನಡೆಸಿದ್ದು,ಜನನಿಬಿಡ ಪ್ರದೇಶದಲ್ಲಿ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ನಿರ್ದೇಶನದ ಮೆರಗೆ ಜಿಲ್ಲಾಡಳಿತ ಸಿದ್ಧವಾಗುತ್ತಿದೆ.

ಈಗಾಗಲೇ ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಲಸಿಕೆ ನೀಡುವ ಸದುದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿ ಬರುವ ಧಾರವಾಡ ಜಿಲ್ಲಾ ಆಸ್ಪತ್ರೆ, ಕಿಮ್ಸ್ ಹಾಗೂ ವಿಮಾನ ನಿಲ್ದಾಣದಲ್ಲಿ ಲಸಿಕೆ ಸಂಗ್ರಹಣಾ ಘಟಕ ಸ್ಥಾಪನೆ ಮಾಡುತ್ತಿದ್ದು,ಈಗಾಗಲೇ 20 ಸಾವಿರ ಹೆಲ್ತ್ ಕೇರ್ ಡಾಟಾ ಬೆಸ್ ವರ್ಕರ್ಸ್ ನೇಮಕಾತಿ ಮಾಡಿಕೊಂಡಿದ್ದು,ಪ್ರತಿಯೊಂದು ಘಟಕದಲ್ಲಿ ಕೂಡ ಐದು ಸಾವಿರ ಲಸಿಕೆಯನ್ನು ಇಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡ ಲಸಿಕೆಯನ್ನು ಇಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದು,ಸರ್ಕಾರ ಕೂಡ ಧಾರವಾಡ ಜಿಲ್ಲೆ ಆರು ಲಕ್ಷ ಲಸಿಕೆ ಸಂಗ್ರಹಿಸುವ ದೊಡ್ಡ ಗಾತ್ರದ ರೆಪ್ರಿಜೆಟರ್ ಕೂಡ ನೀಡುತ್ತಿದೆ.ಅಲ್ಲದೇ ವೇರ್ ಹೌಸ್ ನಲ್ಲಿ ಕೂಡ ಲಸಿಕೆ ಇಡುವ ವ್ಯವಸ್ಥೆ ಇದ್ದು,ಒಟ್ಟು ಇಪತ್ತು ಲಕ್ಷ ಲಸಿಕೆ ಸಂಗ್ರಹ ಸಾಮರ್ಥ್ಯ ಜಿಲ್ಲೆಯೂ ಹೊಂದಿದೆ.ಆದ್ದರಿಂದ ಲಸಿಕೆ ಕೈ ಸೇರುತ್ತಿದ್ದಂತೆಯೇ ಕಾರ್ಯಾಚರಣೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

ಒಟ್ಟಿನಲ್ಲಿ ಲಸಿಕೆ ಆಗಮನಕ್ಕೆ ಕಾಯುತ್ತಿರುವ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು,ನಿರೀಕ್ಷೆಗೂ ಮೀರಿ ಶ್ರಮಿಸುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ ವ್ಯಕ್ತಿ ಪಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

18/12/2020 05:02 pm

Cinque Terre

37.31 K

Cinque Terre

0

ಸಂಬಂಧಿತ ಸುದ್ದಿ