ಕುಂದಗೋಳ : ಕೊರೊನಾ ವೈರಸ್ ಎರಡನೇ ಅಲೆಯ ಹಾವಳಿ ಹೆಚ್ಚಾಗ್ತಿದೆ ಎಂಬ ಸುದ್ದಿ ಎಲ್ಲೇಡೆ ಹರಿದಾಡ್ತಿದೆ. ಈ ಕಾರಣ ಮತ್ತೆ ಕೊರೊನಾ ವೈರಸ್ ಹತೋಟಿಗೆ ಕುಂದಗೋಳ ತಾಲೂಕ ಆಡಳಿತ, ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ, ಪೊಲೀಸರು ಒಟ್ಟಾಗಿ ಶ್ರಮಿಸುತ್ತಿದ್ದಾರೆ.
ಇಂದು ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ನಾಲ್ಕು ಇಲಾಖೆ ಒಟ್ಟಾಗಿ ಮಾಸ್ಕ್ ಇಲ್ಲದೆ ಸಂಚರಿಸುವ ಸವಾರರನ್ನು ತಡೆದು, ದಂಡ ವಿಧಿಸಿ ಜೊತೆ ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಟೆಸ್ಟ್ ಮಾಡಿಸಿ ಉಚಿತವಾಗಿ ಮಾಸ್ಕ್ ನೀಡಿ ಜನರನ್ನ ಕಳುಹಿಸುತ್ತಿದ್ದಾರೆ.
ಈ ಮಾಸ್ಕ್ ಗೊಡವೆ ಕೇವಲ ಖಾಸಗಿ ವಾಹನ ಸವಾರರಷ್ಟೇ ಅಲ್ಲಾ ಸಾರಿಗೆ ಬಸ್ ಗಳಲ್ಲಿ ಮಾಸ್ಕ್ ಇಲ್ಲದೆ ಇರೋ ಪ್ರಯಾಣಿಕರನ್ನು ಕೆಳಗಿಳಿಸಿ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಈ ನಿಯಮಕ್ಕೆ ಕೆಲ ಪ್ರಯಾಣಿಕರು ನಮ್ಗೆ ಈ ಟೆಸ್ಟ್ ಎಲ್ಲಾ ಬೇಡ ಎಂದು ಕ್ಯಾತೆ ತಗೆದ್ರೂ ಈ ಅಧಿಕಾರಿಗಳು ಮಾತ್ರ ಮಾಸ್ಕ್ ಇಲ್ಲದ ಯಾವೊಬ್ಬ ಸವಾರರನ್ನು ಕೈ ಬಿಡ್ತಿಲ್ಲಾ. ಒಟ್ಟಾರೆ ಕುಂದಗೋಳ ಪಟ್ಟಣದಲ್ಲಿ ವಾಹನ ಸವಾರರು ಮಾಸ್ಕ್ ಇದ್ರೆ ಮಾತ್ರ ಸೇಪ್.
Kshetra Samachara
07/12/2020 03:14 pm