ಧಾರವಾಡ: ನಾಲ್ಕೈದು ತಿಂಗಳ ಹಿಂದೆ ಕೊರೊನಾ ಅಂದ್ರೆ ಜನ ಬೆಚ್ಚಿ ಬೀಳ್ತಾ ಇದ್ರು. ಅದರ ಸಲುವಾಗಿ ಜಾತ್ರೆ, ಸಮಾರಂಭ ಎಲ್ಲವೂ ಕೂಡ ರದ್ದಾಗಿದ್ವು. ಆದ್ರೆ, ಈಗ ಜನ ಕೊರೊನಾಕ್ಕೆ ಭಯ ಪಡ್ತಿಲ್ಲ. ಬದಲಿಗೆ ಕೊರೊನಾನೇ ಜನರಿಗೆ ಹೆದರಿ ಓಡಿ ಹೋಗ್ತಾ ಇದೆ ಏನೋ ಎನಿಸುತ್ತಿದೆ.
ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ನಿನ್ನೆ ನಡೆದ ಕಾರ್ಯಕ್ರಮ.
ಹೌದು! ಸೀಗೆ ಹುಣ್ಣಿಮೆ ಸಲುವಾಗಿ ಮನಸೂರು ಗ್ರಾಮದಲ್ಲಿ ಗ್ರಾಮದ ಯುವಕರು ಹಾಗೂ ಬಾಲಕಿಯರಿಂದ ಕೋಲಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿದ್ರೆ ನಿಮಗೇ ಗೊತ್ತಾಗುತ್ತೆ ಕೊರೊನಾ ಇದೆಯೋ ಇಲ್ವೋ ಅಂತಾ.
ನೀವು ದೃಶ್ಯಗಳಲ್ಲಿ ನೋಡುತ್ತಿರಬಹುದು ಇಲ್ಲಿ ಸೇರಿರುವ ಯಾವೊಬ್ಬ ವ್ಯಕ್ತಿಯ ಮುಖದಲ್ಲಿ ಮಾಸ್ಕ್ ಇಲ್ಲ. ಸಾಮಾಜಿಕ ಅಂತರವಂತೂ ಮೊದಲೇ ಇಲ್ಲ ಬಿಡಿ. ಆದ್ರೆ, ನಮ್ಮ ಜನ ಕೊರೊನಾಕ್ಕೆ ಹೆದರದೇ ಸೀಗೆ ಹುಣ್ಣಿಮೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.
ಹಬ್ಬದ ಅದ್ಧೂರಿ ಆಚರಣೆ ಜೊತೆಗೆ ಕೊರೊನಾದಿಂದ ಪಾರಾಗಲು ಸರ್ಕಾರದ ನಿಯಮಾವಳಿಗಳನ್ನೂ ಅನುಸರಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಲ್ವೇ?
Kshetra Samachara
31/10/2020 12:46 pm