ಧಾರವಾಡ: ಧಾರವಾಡದ ಡಿಮಾನ್ಸ್ ನಲ್ಲಿ ಕಳೆದ 7 ತಿಂಗಳ ಹಿಂದೆ ಆರಂಭಿಸಲಾಗಿರುವ ಕೊರೊನಾ ತಪಾಸಣಾ ಕೇಂದ್ರದ ಲ್ಯಾಬ್‌ನಲ್ಲಿ ಈವೆರಗೂ 1 ಲಕ್ಷ ಮಾದರಿಗಳನ್ನು ತಪಾಸಣೆಗೊಳಪಡಿಸಲಾಗಿದೆ.
ಪ್ರತಿದಿನ 1 ಸಾವಿರ ಮಾದರಿಗಳನ್ನು ಈ ಲ್ಯಾಬ್ ತಪಾಸಣೆಗೊಳಪಡಿಸುತ್ತಿದ್ದು, ಉತ್ತಮ ಕಾರ್ಯಕ್ಷಮತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಐಸಿಎಂಆರ್ ಹೆಚ್ಚುವರಿ ಉಪಕರಣಗಳನ್ನು ಈ ಕೇಂದ್ರಕ್ಕೆ ಒದಗಿಸಿವೆ.
ಈ ಕೇಂದ್ರವು 1 ಲಕ್ಷ ಮಾದರಿಗಳನ್ನು ತಪಾಸಣೆಗೊಳಪಡಿಸಿದ್ದಕ್ಕಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಬುಧವಾರ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಪರೀಕ್ಷೆಗೆ ಅಗತ್ಯವಾದ ಆಟೊ ಎಕ್ಸ್‌ಟ್ರಾಕ್ಟರ್ ಕಿಟ್‌ಗಳು ಮತ್ತು ಉಪಭೋಗ್ಯ ವಸ್ತುಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ಬಹಳ ಸಹಕಾರ ನೀಡಿದೆ. ಜೊತೆಗೆ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚುವರಿ ಸಹಾಯಕರನ್ನು ಸಹ ಒದಗಿಸಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.
Kshetra Samachara
21/10/2020 04:57 pm