ಕುಂದಗೋಳ : ಕಳೆದ ಹಲವಾರು ದಿನಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಜಿಲ್ಲಾಡಳಿತದ ಸರ್ಕಾರಿ ಆಧಾರ್ ಸೇವಾ ಕೇಂದ್ರ ಪುನಃ ಕುಂದಗೋಳದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಆರಂಭವಾಗಿದೆ.
ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಅಗತ್ಯವಾದ ಆಧಾರ್ ಕಾರ್ಡ್ ಪಡೆಯಲು ಸರ್ಕಾರಿ ಆಧಾರ್ ಕೇಂದ್ರ ಬಂದ್ ಆದ ಪರಿಣಾಮ ಜನರು ಖಾಸಗಿ ಆಧಾರ್ ಕೇಂದ್ರಕ್ಕೆ ಹೋಗಿ ದುಪ್ಪಟ್ಟು ಹಣ ನೀಡಿ ಆಧಾರ್ ಪಡೆಯುವ ವದಂತಿಗಳು ಕೇಳಿ ಬಂದಿದ್ದವು.
ಇದೀಗ ಜಿಲ್ಲಾಡಳಿತದ ಸರ್ಕಾರಿ ಆಧಾರ್ ಸೇವಾ ಕೇಂದ್ರ ಪುನಃ ಆರಂಭವಾಗಿ ಜನರಿಗೆ ನಿತ್ಯ ಸರ್ಕಾರಿ ರಜಾ ದಿನ ಹೊರತುಪಡಿಸಿ ಉಳಿದ ದಿನ ಸೇವೆ ನೀಡಲು ಬಾಗಿಲು ತೆರೆದಿದೆ.
ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆ ಜನರು ಆಧಾರ್ ಕೇಂದ್ರದ ಸೌಲಭ್ಯ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಆಧಾರ್ ಪ್ರತಿನಿಧಿ ರಮೇಶ್ ಶಿರಗುಪ್ಪಿ ಮೊಬೈಲ್ ಸಂಖ್ಯೆ 8497828170 ಸಂಪರ್ಕ ಮಾಡಬಹುದು.
Kshetra Samachara
20/07/2022 02:28 pm