ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯದ ರೈತರ ಮೊಗದಲ್ಲಿ ಸಂತಸ ಮೂಡಿಸಿದ ಹುಬ್ಬಳ್ಳಿ ತಹಶೀಲ್ದಾರ್…

ಪಬ್ಲಿಕ್ ನೆಕ್ಸ್ಟ್ ವಿಶೇಷ-

ಈರಣ್ಣ ವಾಲಿಕಾರ,ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಆರಂಭದಲ್ಲಿ ವಾಣಿಜ್ಯ ನಗರಿಯ ತಾಲೂಕಿಗಷ್ಟೇ ಪ್ಲ್ಯಾನ್ ಮಾಡಲಾಗಿದ್ದ ಈ ಕಾರ್ಯಕ್ರಮ ಇದೀಗ ರಾಜ್ಯವ್ಯಾಪಿ ಹರಡಿದೆ. ಆ ಓರ್ವ ಅಧಿಕಾರಿಯ ಉತ್ತಮ ಜನಪರ ಜವಾಬ್ದಾರಿಗೆ ಇಂದು ರಾಜ್ಯದ ರೈತರ ಮನೆ ಬಾಗಿಲಿಗೆ ಅವರ ಹಕ್ಕುಪತ್ರಗಳು ತಲುಪುತ್ತಿವೆ. ಹಾಗಾದ್ರೆ ಯಾರು ಆ ಅಧಿಕಾರಿ. ಆತ ನೀಡಿದ್ದ ಪ್ಲ್ಯಾನ್ ಏನು ಗೊತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್....

ಇಂದಿನಿಂದ ರಾಜ್ಯದೆಲ್ಲೆಡೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಅನ್ನೋ ನೂತನ ಪ್ರಯೋಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ಆಯಾ ಸಚಿವರು, ಶಾಸಕರು ಜನರ ಮನೆಯ ಬಾಗಿಲಿಗೆ ದಾಖಲೆಗಳನ್ನ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಈ ವಿನೂತನ ಕಾರ್ಯ ಆರಂಭವಾಗಿದ್ದೆ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ.

ಹೌದು ಹುಬ್ಬಳ್ಳಿಯ ತಹಶೀಲ್ದಾರ್ ಆದ ಶಶಿಧರ ಮಾಡ್ಯಾಳ್ ಈ ಹಿಂದೆಯೇ ಕಂದಾಯ ದಾಖಲೆಗಳನ್ನ ರೈತರ ಮನೆಬಾಗಿಲಿಗೆ ಮುಟ್ಟಿಸುವ ಕಾರ್ಯದ ಆರಂಭಕ್ಕೆ ಎಲ್ಲ ಸಿದ್ಧತೆ ನಡೆಸಿದ್ರು. ಅದರಂತೆ ಕಂದಾಯ ಸಚಿವ ಆರ್ ಅಶೋಕ್ ಬಂದಾಗಲೂ ಅವರೊಟ್ಟಿಗೆ 2 ಗಂಟೆಗಳ ಕಾಲ ಚರ್ಚೆ ಸಹ ನಡೆಸಿದ್ರು. ಇದನ್ನರಿತ ಕಂದಾಯ ಸಚಿವ ಆರ್ ಅಶೋಕ್ ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗದೆ ಇದು ರಾಜ್ಯವ್ಯಾಪಿ ಆಗಬೇಕು ಅನ್ನೋ ಪ್ಲಾನ್ ಮೂಲಕ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ಕೆ ರೈತರ ಮುಖದಲ್ಲಿ ಸಂತಸ ಮೂಡಿದೆ.

ಇಂದು ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 8 ತಾಲೂಕಿನಲ್ಲಿ 6513 ಕುಟುಂಬಗಳಿಗೆ ಕಂದಾಯ ದಾಖಲೆಗಳನ್ನ ಹಂಚಲಾಗಿದೆ. ಅದರಲ್ಲೂ ಆದಾಯ ಪ್ರಮಾಣಪತ್ರ, ಪಹಣಿ ಪತ್ರ, ಜಾತಿ ಪ್ರಮಾಣ ಪತ್ರ, ಸರ್ವೇ ನಕ್ಷೆಗಳ ದಾಖಲೆ ಪತ್ರ ಸೇರಿದಂತೆ ಇ-ಆಡಳಿತದಲ್ಲಿ ಬರುವ ಕುಟುಂಬವಾರು ದಾಖಲೆಗಳನ್ನ ಪ್ಲಾಸ್ಟಿಕ್ ಲಕೋಟೆಯಲ್ಲಿ ಹಾಕಿ ನೀಡಲಾಗಿದೆ. ಇನ್ನು ಈ ಕಾರ್ಯ ಜನವರಿ 26 ರಂದೆ ಆಗಬೇಕಿತ್ತು. ಆದ್ರೆ ಕೆಲ ತಾಂತ್ರಿಕ ಸಮಸ್ಯೆಯಿಂದ ಸದ್ಯ ಇದೀಗ ಆರಂಭವಾಗಿದ್ದು, ಬಡಜನರು ಕಚೇರಿಗಳಿಗೆ ಅಲೆಯುವ ಕೆಲಸಕ್ಕೆ ಬ್ರೇಕ್ ಬಿದ್ದಂತಾಗಿದೆ.

ಒಟ್ಟಾರೆ ಒಂದೇ ಒಂದು ದಾಖಲೆ ಪಡೆಯಲು ನಿತ್ಯ ಕಚೇರಿಗೆ ಓಡಾಡುತ್ತಿದ್ದ ರೈತ ಕುಟುಂಬಗಳಿಗೆ, ಈ ನೂತನ ಯೋಜನೆ ಕೊಂಚ ಒತ್ತಡದಿಂದ ಪಾರು ಮಾಡಿದೆ. ಕೇವಲ ತಾಲೂಕಿಗೆ ಸೀಮಿತವಾಗಿದ್ದ ಈ ಯೋಜನೆ ಇದೀಗ ರಾಜ್ಯಾದ್ಯಂತ ಆರಂಭವಾಗಿದ್ದು ಓರ್ವ ಅಧಿಕಾರಿಯ ದಕ್ಷ ವಿಚಾರಗಳು ಏನೆಲ್ಲಾ ಬದಲಾವಣೆ ಮಾಡುತ್ತೆ ಅನ್ನೋದು ಈ ಮೂಲಕ ಹೊರಬಿದ್ದಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/03/2022 09:56 pm

Cinque Terre

139.58 K

Cinque Terre

7

ಸಂಬಂಧಿತ ಸುದ್ದಿ