ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅರೇಬಸನಕೊಪ್ಪ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಿಮಿತ್ತ ತಹಶೀಲ್ದಾರ ಗ್ರಾಮ ಸಂಚಾರ

ಕಲಘಟಗಿ: ತಾಲೂಕಿನ ಅರೇಬಸನಕೊಪ್ಪ ಗ್ರಾಮದಲ್ಲಿ ತಹಶೀಲ್ದಾರ ಗ್ರಾಮವಾಸ್ತವ್ಯ ನಿಮಿತ್ತವಾಗಿ ಗ್ರಾಮ ಸಂಚಾರ ನಡೆಸಿ ಜನರ ಅಹವಾಲು ಕೇಳಿದರು.

ಅಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯದ ಅಂಗವಾಗಿ ಅರೇಬಸನಕೊಪ್ಪ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಉದ್ಘಾಟಿಸಿ ನಂತರ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಗ್ರಾಮದಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮದಲ್ಲಿ ವಿದ್ಯುತ್ ದೀಪದ ಕಂಬಗಳು ವಾಲಿರುವುದನ್ನು ಗಮನಿಸಿ ತೆರವು ಮಾಡಲು ತಿಳಿಸಿದರು.ಬಸ್ ಸಮಸ್ಯೆ,ಅಕ್ರಮ ಸರಾಯಿ ಮಾರಾಟದ ಕುರಿತು ದೂರುಗಳು ಕೇಳಿ ಬಂದವು.ಇದೇ ಸಂದರ್ಭದಲ್ಲಿ ಮನೆಗಳು ಇಲ್ಲದೇ ಇರವುವರಿಗೆ ಸರಕಾರದಿಂದ ಆಶ್ರಯ ಮನೆ ನೀಡುವಂತೆ ಗ್ರಾಮಸ್ಥರು ತಹಶೀಲ್ದಾರಗೆ ಮನವಿ‌ ಮಾಡಿದರು.ಸರಕಾರಿ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಿರು ಬಡವರಿಗೆ ಮನೆಗಳ ಹಕ್ಕು ಪತ್ರ ನೀಡುವಂತೆ ವಿನಂತಿಸಿದರು.ಗ್ರಾಮದಲ್ಲಿ ಗಟಾರ ನಿರ್ಮಾಣ ಮಾಡಲು ಜನರು ಒತ್ತಾಯಿಸಿದರು.

ಸಮಸ್ಯೆಗಳ ಪರಿಹಾರಕ್ಕೆ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.ತಾ ಪಂ ಇ‌ ಒ ಚವ್ಹಾಣ,ಗ್ರಾ ಪಂ ಅಧ್ಯಕ್ಷ ಬಸವರಾಜ‌ ದೊಡ್ಡಮನಿ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

16/10/2021 05:22 pm

Cinque Terre

18.04 K

Cinque Terre

1

ಸಂಬಂಧಿತ ಸುದ್ದಿ