ಹುಬ್ಬಳ್ಳಿ: ಕೋವಿಡ್ ಕಾರಣದಿಂದ ಪರಿಶಿಷ್ಟ ಜಾತಿ( ಎಸ್.ಸಿ) ಜಾಗೂ ಪರಿಶಿಷ್ಟ ಪಂಗಡ (ಎಸ್.ಟಿ) ದ ತ್ರೈಮಾಸಿಕ ಕುಂದು ಕೊರತೆ ಸಭೆ ಆಯೋಜಿಸಲು ಸಾಧ್ಯವಾಗಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಗೆ ಸಂಬಂದ ಪಟ್ಟಂತೆ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗುವುದು ಎಂದು ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.
ಹುಬ್ಬಳ್ಳಿ ತಾ.ಪಂ. ಕಾರ್ಯಾಲಯದಲ್ಲಿ ಇಂದು ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ/ವರ್ಗ ದೌರ್ಜನ್ಯ ಪ್ರತಿಬಂಧಕ ಅಧಿನಿಯ 1988ರ ಕುರಿತು ವಿಚಾರ ಸಂಕೀರ್ಣ ಮತ್ತು ಕಮ್ಮಟ ಕಾರ್ಯಾಗಾರ ಆಯೋಜಿಸುವ ಕುರಿತಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೊಂದು ಕೊರತೆ ಸಭೆ ಆಯೋಜಿಸಿದ ಬಳಿಕವೇ ವಿಚಾರ ಸಂಕೀರ್ಣ ಮತ್ತು ಕಮ್ಮಟ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಹಿಂದಿನ ಸಭೆಯ ನಡಾವಳಿಗಳ ಅನ್ವಯ ಕೈಗೊಳ್ಳಲಾಗಿರುವ ಅನುಪಾಲನಾ ವರದಿಯನ್ನು ಸಭೆಯಲ್ಲಿ ಮಂಡಿಸಲಾಗುವುದು. ಪರಿಶಿಷ್ಟ ಜಾತಿ ವರ್ಗ ದೌರ್ಜನ್ಯ ಪ್ರಕರಣಗಳಲ್ಲಿ ಯಾವುದೇ ತರಹದ ನಿರ್ಲಕ್ಷ್ಯ ವಹಿಸಿಲ್ಲ. ತಾಲೂಕು ಮಟ್ಟದಲ್ಲಿ ಇರುವ ಪ್ರಕರಣಗಳಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಕೆಲವು ಪ್ರಕರಣಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತದಲ್ಲಿ ಇವೆ. ಕೋವಿಡ್ ಸಂದರ್ಭದಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ದವಸ ಧಾನ್ಯಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಅಧಿಕಾರಿ ಭವಿಷ್ಯಾ ಮಾರ್ಟಿನಾ, ಕಳೆದ ವಾರದಿಂದ ಹುಬ್ಬಳ್ಳಿ ಸಮಾಜ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹಿಂದಿನ ಕುಂದು ಕೊರತೆ ಸಭೆಗಳ ನಡಾವಳಿಗಳನ್ನು ತಿಳಿದುಕೊಂಡು, ದೌರ್ಜನ್ಯ ಪ್ರಕರಣಗಳಲ್ಲಿ ಕ್ರಮಕೈಗೊಳ್ಳುತ್ತೇನೆ. ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ/ವರ್ಗ ದೌರ್ಜನ್ಯ ಪ್ರತಿಬಂಧಕ ಅಧಿನಿಯ 1988ರ ಕುರಿತು ವಿಚಾರ ಸಂಕೀರ್ಣ ಕೈಗೊಳ್ಳಲು ಹುಬ್ಬಳ್ಳಿ ತಾಲೂಕಿಗೆ 1.20 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ದಿವಂಗತರಾದ ಸಮುದಾಯದ ನಾಯಕ ಪೀತಾಂಬರಪ್ಪ ಬಿಳ್ಳಾರಿ, ಎಂ.ಬಿ.ಬನ್ನಿಗೊಳ್, ಕೋದಂಡಿ ಸ್ಮರಣಾರ್ಥ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. ಮುಖಂಡರು ಕೊಂದು ಕೊರತೆ ಸಭೆ ಆಯೋಜಿಸಿದ ನಂತರ ವಿಚಾರ ಸಂಕೀರ್ಣ ಏರ್ಪಡಿಸುವಂತೆ ಮನವಿ ಮಾಡಿದರು.
Kshetra Samachara
13/01/2021 06:27 pm