ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಫುಟ್ ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಚುರುಕಾಗಿ ನಡೆದಿದ್ದು,ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಹುಬ್ಬಳ್ಳಿಯ ಮಧುರಾ ಕಾಲೋನಿ, ರಮೇಶ್ ಭವನ ರಸ್ತೆ, ಶಾಹ್ ಬಜಾರ್‌ನಲ್ಲಿ ಅತಿಕ್ರಮಣ ತೆರವು ಮಾಡಲಾಯಿತು.
ರಸ್ತೆ, ಫುಟ್‌ಪಾತ್, ಪಾರ್ಕಿಂಗ್ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ ಪಾಲಿಕೆ ಅಧಿಕಾರಿಗಳು ಡಬ್ಬಿ ಅಂಗಡಿ, ತಳ್ಳುಬಂಡಿ, ಚಾಟ್ ಸೆಂಟರ್ ಗಳನ್ನು ತೆರವು ಮಾಡಿದರು.
ಸುಮಾರು ವರ್ಷಗಳಿಂದ ಫುಟ್ ಪಾತ್ ಹಾಗೂ ಪಾರ್ಕಿಂಗ್ ಜಾಗವನ್ನು ಅತಿಕ್ರಮಣಗೊಳಿಸಿದ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಮೇರೆಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿದರು
Kshetra Samachara
29/12/2020 02:01 pm