ಕಾನೂನು ಸುವ್ಯವಸ್ಥೆ ಕಾಪಾಡೋದು ನಮ್ಮ ಉದ್ದೇಶ. ಹುಬ್ಬಳ್ಳಿ ಧಾರವಾಡ,ಬೆಳಗಾವಿ ಸೇರಿ ರಾಜ್ಯದ ಮೂರು ಕಡೆ ಗಣೇಶ ಹಬ್ಬ ಜೋರಾಗಿ ಮಾಡುತ್ತಾರೆ. ಹೀಗಾಗಿ ಶಾಂತಿ ಸುವ್ಯವಸ್ಥೆ ದೃಷ್ಠಿಯಿಂದ ಭೇಟಿ ನೀಡಿದ್ದೆನೆ. ಸರ್ಕಾರದ ನಿರ್ಧಾರದ ಪ್ರಕಾರ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ ಎಂದು ಎಡಿಜಿಪಿ ಅಲೋಕಕುಮಾರ್ ಹೇಳಿದರು.
ಈದ್ಗಾ ಮೈದಾನದ ಪರಿಶೀಲನೆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ದಲ್ಲಿ ಗಣೇಶೋತ್ಸವ ಆಚರಣೆ ಅವಕಾಶ ಕೋರಿ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದ್ದು, ಭದ್ರತಾ ಪರಿಶೀಲನೆಗೆ ಬಂದಿದ್ದೇನೆ. ಅನುಮತಿಯ ವಿಚಾರ ಮಹಾನಗರ ಪಾಲಿಕೆಗೆ ಬಿಟ್ಟ ನಿರ್ಧಾರವಾಗಿದೆ ಎಂದರು.
ಪಾಲಿಕೆ ಹಾಗೂ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆ ಕೆಲಸ ಮಾಡುತ್ತೇವೆ. ಈ ಭಾರಿ ಈದ್ಗಾದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಅವಕಾಶ ಕೇಳಿದ್ದಾರೆ. ಪಾಲಿಕೆ ಸದನ ಸದನ ಸಮಿತಿ ಮಾಡಿದ್ದಾರೆ. ಸರ್ಕಾರ ಏನ್ ನಿರ್ಧಾರ ತೆಗೆದುಕೊಳ್ಳುತ್ತೆ, ಅದರ ಪ್ರಕಾರ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/08/2022 03:08 pm