ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಖರೀದಿ ಆಗದೇ ಉಳಿಯಿತು 20 ಟನ್ ಸ್ಪಿಕ್ ಜಿಪ್ಸಂ !; ಅತಿವೃಷ್ಟಿ ಸ್ಟ್ರೋಕ್

ರೈತಾಪಿ ಜನರ ವಾಣಿಜ್ಯ ಬೆಳೆ ಶೇಂಗಾ ಉತ್ತಮ ಫಸಲು ಬರುತ್ತೆ ಎಂಬ ನಂಬಿಕೆಯನ್ನು ಎಡೆಬಿಡದೆ ಸುರಿದ ಮಳೆ ಅತಿವೃಷ್ಟಿ ಸೃಷ್ಟಿಸಿ ಸುಳ್ಳು ಮಾಡಿದೆ.

ಈ ಹಿನ್ನೆಲೆಯಲ್ಲಿ ರೈತರು ಶೇಂಗಾ ಬೆಳೆಗೆ ನಿರ್ಲಕ್ಷ್ಯ ತೋರಿದ ಪರಿಣಾಮ ರೈತ ಸಂಪರ್ಕ ಕೇಂದ್ರದ ಶೇಂಗಾ ಬೆಳೆಯಲ್ಲಿ ಎಣ್ಣೆ ಅಂಶ ಹೆಚ್ಚಿಸುವ ಬಹು ಬೇಡಿಕೆಯ ಲಘು ಪೋಷಕಾಂಶ ಖರೀದಿ ಇಲ್ಲದೆ ಹಾಗೇ ಉಳಿದಿದೆ.

ಹೌದು... ಕುಂದಗೋಳ ರೈತ ಸಂಪರ್ಕ ಕೇಂದ್ರಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಸರ್ಕಾರದಿಂದ ಆಮದಾದ ಸ್ಪಿಕ್ ಜಿಪ್ಸಂ ಲಘು ಪೋಷಕಾಂಶ ಗೊಬ್ಬರದ 500 ಚೀಲಗಳು ಅಂದ್ರೇ 20 ಟನ್ ಲಘು ಪೋಷಕಾಂಶ ಬಳಕೆಯಿಲ್ಲದೆ ಉಳಿದಿದೆ‌. ಪ್ರತಿ ವರ್ಷ 100 ರಿಂದ 110 ಟನ್ ರೈತರಿಂದ ಖರೀದಿ ಆಗುತ್ತಿದ್ದ ಸ್ಪಿಕ್ ಜಿಪ್ಸಂ ಈ ವರ್ಷ ಕೇವಲ 20 ಟನ್ ಇದ್ದರೂ ಖರೀದಿಗೆ ರೈತರು ಮನಸ್ಸು ಮಾಡಿಲ್ಲ.

ಸದ್ಯ ರೈತ ಸಂಪರ್ಕ ಕೇಂದ್ರದಲ್ಲಿ ಜಾಗ ಹಿಡಿಸಲಾರದಷ್ಟು ಸ್ಪಿಕ್ ಜಿಪ್ಸಂ ಲಘು ಪೋಷಕಾಂಶದ ಪಾಕೆಟ್ ಸಂಗ್ರಹವಿದೆ. ಸದ್ಯ ಶೇಂಗಾ ಬೆಳೆ ಅತಿವೃಷ್ಟಿಗೆ ಸಿಲುಕಿದ ಪರಿಣಾಮ ಸ್ಪಿಕ್ ಜಿಪ್ಸಂ ಪೋಷಕಾಂಶ ಪುನಃ ಇಲಾಖೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಶೇಂಗಾ ಬೆಳೆ ಉಪಚಾರವನ್ನು ರೈತ ಅತಿವೃಷ್ಟಿ ಕಾರಣ ನಿರ್ಲಕ್ಷ್ಯ ಮಾಡಿದ್ದಾನೆ.

- ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/09/2022 04:28 pm

Cinque Terre

59.44 K

Cinque Terre

0

ಸಂಬಂಧಿತ ಸುದ್ದಿ