ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊಲ ಬಿಟ್ಟು ಹೋರಾಟಕ್ಕೆ ಹೊರಟ ರೈತ; ಎಷ್ಟು ಕಷ್ಟ ಐತೋ, ಯಪ್ಪಾ ಅನ್ನದಾತ !

ಅವರೆಲ್ಲರೂ ಕೈ ಕೆಸರಾದರೇ ಬಾಯಿ ಮೊಸರು ಎಂದುಕೊಂಡ ಅನ್ನದಾತರು. ದೇಶದ ಹಸಿವು ನೀಗಿಸುವ ಅವರು ತಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವಂತಹ ಸ್ಥಿತಿ ಬಂದೊದಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಹೀಗೆ ಕೈಯಲ್ಲಿ ಮನವಿ ಪತ್ರ ಹಿಡಿದುಕೊಂಡ ರೈತರು. ಮಳೆಯಿಂದ ಬೆಳೆಯೆಲ್ಲ ಹಾನಿಯಾಗಿ ಹಾಹಾಕಾರವಾದ ಬದುಕು. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ ಅನ್ನದಾತನ ಬದುಕು.‌

ಹೌದು.. ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಅನ್ನದಾತನ ಬದುಕು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದೆ. ಹೀಗಿದ್ದರೂ ಆಳುವ ಸರ್ಕಾರ ಮಾತ್ರ ಅನ್ನದಾತನ ಕಷ್ಟವನ್ನು ಆಲಿಸದೇ ಬೇಕಾಬಿಟ್ಟಿಯಾಗಿ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ರೈತ ಒಕ್ಕಲುತನ ಬಿಟ್ಟು ಒಟ್ಟುಗೂಡಿ ಹೋರಾಟಕ್ಕೆ ಇಳಿಯುವಂತಾಗಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಬೆಂಗಳೂರು ಚಲೋ ಅಭಿಯಾನವನ್ನು ಕೈಗೊಂಡಿದೆ.

ಕೇಂದ್ರ ಸರ್ಕಾರ ಹಿಂಪಡೆದ ಕೃಷಿ ಕಾನೂನು ರಾಜ್ಯ ಸರ್ಕಾರ ಕೂಡ ಹಿಂಪಡೆಯಬೇಕು. ವಿದ್ಯುತ್ ಖಾಸಗಿಕರಣ ಹೀಗೆ ಹತ್ತು ಹಲವು ಬೇಡಿಕೆಯನ್ನು ಇಟ್ಟುಕೊಂಡ ರೈತರು, ಈ ಭಾಗದವರೇ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರ ಭೇಟಿ ಮಾಡಿ ಅನ್ನದಾತನ ಕಷ್ಟದ ಕುರಿತು ಅಂಗಲಾಚಲು ಹೊರಟಿರುವುದು ನಿಜಕ್ಕೂ ವಿಪರ್ಯಾಸ.

ಒಟ್ಟಿನಲ್ಲಿ ವರುಣನ ಆರ್ಭಟಕ್ಕೆ ಅನ್ನದಾತ ನಿಜಕ್ಕೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಈ ಬಗ್ಗೆ ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರು ಸೂಕ್ತ ನಿರ್ಧಾರ ಕೈಗೊಂಡು ಅನ್ನದಾತನ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2022 07:06 pm

Cinque Terre

55.05 K

Cinque Terre

3

ಸಂಬಂಧಿತ ಸುದ್ದಿ