ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 77.70 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕಿ ಭೂಮಿ ಪೂಜೆ

ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನ ಹಲವಾರು ರಸ್ತೆ ಹಾಗೂ ಸೇತುವೆಗಳು ಪುನಃ ಅಭಿವೃದ್ಧಿ ಆಗಬೇಕಿದೆ. ಈ ದೃಷ್ಟಿಯಿಂದ ಇಂದು ಕುಂದಗೋಳ ತಾಲೂಕಿನ ಪಶುಪತಿಹಾಳ ರೊಟ್ಟಿಗವಾಡದ 17 ಕಿಲೋ ಮೀಟರ್ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ 77 ಲಕ್ಷ 70 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.

ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ನನ್ನ ಕೊಡುಗೆ ನಿರಂತರ ಎಂದರು. ಈ ಸಂದರ್ಭದಲ್ಲಿ ರೊಟ್ಟಿವಾಡ ಪಶುಪತಿಹಾಳ ಗ್ರಾಮದ ಜನರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

26/02/2022 06:25 pm

Cinque Terre

18.97 K

Cinque Terre

4

ಸಂಬಂಧಿತ ಸುದ್ದಿ