ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಹುಬ್ಬಳ್ಳಿಯ ತೋಳನಕೆರೆಯಿಂದ ಆಯೋಜಿಸಿರುವ ತಿರಂಗಾ ನಡೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಚಾಲನೆ ನೀಡಿದರು.
ಮಕ್ಕಳ ಸ್ಕೇಟಿಂಗ್, ಕಲಾವಿದರ ಡೊಳ್ಳು ಕುಣಿತ ಗಮನ ಸೆಳೆದವು. ಗೋಕುಲ ರಸ್ತೆಯ ವಾಕರಸಾಸಂ ಕೇಂದ್ರ ಕಚೇರಿ ಬಳಿ ದೇಶಪ್ರೇಮ ಸಾರುವ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಿದರು.
ಮೇಯರ್ ಈರೇಶ ಅಂಚಟಗೇರಿ, ಉಪಮೇಯರ್ ಉಮಾ ಮುಕುಂದ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಜಿಪಂ ಸಿಇಓ ಡಾ. ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಪಾಲಿಕೆ ಸದಸ್ಯೆ ರೂಪಾಶೆಟ್ಟಿ ಸೇರಿದಂತೆ ನಗರದ ಚೇತನಾ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.
Kshetra Samachara
11/08/2022 03:00 pm