ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅತಿವೃಷ್ಠಿ ಬಾಧಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವರ ಭೇಟಿ; ಪರಿಹಾರದ ಭರವಸೆ

ಧಾರವಾಡ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ರೈತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಬ್ಬಳ್ಳಿ ತಾಲ್ಲೂಕಿನ ನಲವಡಿ ಹಾಗೂ ಶಿರಗುಪ್ಪಿ ಹತ್ತಿರದ ಅತಿವೃಷ್ಟಿ ಬಾಧಿತ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು. ಇದೇ ವೇಳೆ ರೈತರ ಸಮಸ್ಯೆಗಳನ್ನು ಆಲಿಸಿದ ಸಚಿವರು ‌ಕೂಡಲೇ ಬೆಳೆ ಪರಿಹಾರ ನೀಡುವ ಭರವಸೆ ನೀಡಿದರು.

ಈಗಾಗಲೇ ಹುಬ್ಬಳ್ಳಿ ತಾಲೂಕಿನಲ್ಲಿ ಅತಿವೃಷ್ಠಿಗೆ ರೈತರ ಹೆಸರು, ಈರುಳ್ಳಿ, ಹತ್ತಿ ಬೆಳೆ ಹಾನಿಯಾಗಿದ್ದು, ಸರಿಯಾದ ಸಮಯಕ್ಕೆ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ರೈತರು ಸಚಿವರ ಹಾಗೂ ಜಿಲ್ಲಾಡಳಿತದ ಮುಂದೇ ತಮ್ಮ ಅಳಲನ್ನು ತೋಡಿಕೊಂಡರು ಇದೇ ವೇಳೆ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಕೂಡಲೇ ವಿಮಾ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ವಿಮಾ ಸಮರ್ಪಕವಾಗಿ ಸಂದಾಯ ಮಾಡುವಂತೆ ಸೂಚನೆ ನೀಡಿದರು.

Edited By :
Kshetra Samachara

Kshetra Samachara

11/08/2022 01:27 pm

Cinque Terre

16.55 K

Cinque Terre

0

ಸಂಬಂಧಿತ ಸುದ್ದಿ