ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಚಿವರ ತವರಲ್ಲೇ ಬೀಜಕ್ಕಾಗಿ ರೈತರ ಹೆಣಗಾಟ

ನವಲಗುಂದ: ಮುಂಗಾರು ಬೆಳೆ ಈ ವರ್ಷವೂ ರೈತರಿಗೆ ಸರಿಯಾಗಿ ಕೈಗೆ ಸಿಕ್ಕಿಲ್ಲ. ಇದರಿಂದ ಹಿಂಗಾರು ಬೆಳೆಯತ್ತ ರೈತರು ತಮ್ಮ ಚಿತ್ತ ಹರಿಸಿದ್ದಾರೆ. ಈಗಾಗಲೇ ನವಲಗುಂದ ತಾಲ್ಲೂಕಿನಲ್ಲಿ ಸರ್ಕಾರದಿಂದ ಬೀಜ ವಿತರಣೆ ಸಹ ಮಾಡಲಾಗುತ್ತಿದೆ. ಆದರೆ ಬೀಜ ವಿತರಣೆಯ ಕೇಂದ್ರದಲ್ಲಿ ರೈತರ ಪಾಡು ಹೇಳತೀರದ್ದಾಗಿದೆ.

ಈ ದೃಶ್ಯಗಳು ನವಲಗುಂದ ಪಟ್ಟಣದ ಬೀಜ ವಿತರಣೆಗಾಗಿ ಸರ್ಕಾರದಿಂದ ತೆರೆದ ಕೌಂಟರ್‌ನಲ್ಲಿ ಕಂಡು ಬಂತು. ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೇ ಗಂಟೆಗಟ್ಟಲೆ ರೈತರು ಬಿತ್ತನೆ ಬೀಜಕ್ಕಾಗಿ ನಿಲ್ಲುವಂತಾಗಿತ್ತು. ಬೀಜ ವಿತರಣೆ ಸರಿಯಾಗಿ ಆಗುತ್ತಿಲ್ಲ. ದಿನಗಳನ್ನು ಮುಂದೂಡುತ್ತಿದ್ದಾರೆ. ಎಫ್‌ಐಡಿಗಾಗಿ ಅಲೆದಾಡಿಸುತ್ತಿದ್ದಾರೆ ಎಂಬ ಹಲವು ಆರೋಪ ರೈತರದ್ದಾಗಿದೆ.

ಇಷ್ಟೆಲ್ಲ ಸಮಸ್ಯೆಗಳನ್ನು ರೈತರು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಈ ಬಗ್ಗೆ ನವಲಗುಂದ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀನಾಥ್ ಚಿಮ್ಮಲ್ಲಗಿ ಅವರ ಗಮನಕ್ಕೆ ತಂದಾಗ ಅವರು ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದು ಹೀಗೆ.

ಇನ್ನು ರೈತರು ಪರದಾಟ ನಡೆಸುತ್ತಿರೋದಂತೂ ಸುಳ್ಳಲ್ಲ. ಈ ಬಗ್ಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ, ರೈತರಿಗೆ ಸಮಸ್ಯೆ ಆಗದಂತೆ, ಬೀಜಗಳ ವಿತರಣೆ, ಎಫ್‌ಐಡಿ ಸೇರಿದಂತೆ ಹಲವು ಸಮಸ್ಯೆಗಳಿಂದ ರೈತರಿಗೆ ಮುಕ್ತಿ ಸಿಗುವಂತೆ ನೋಡಿಕೊಳ್ಳಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

02/10/2022 02:17 pm

Cinque Terre

27.65 K

Cinque Terre

0

ಸಂಬಂಧಿತ ಸುದ್ದಿ