ಕುಂದಗೋಳ: ಕಳೆದ ಹದಿನೈದು ದಿನಗಳ ಹಿಂದೆ ಎಡೆಬಿಡದೆ ಸುರಿದ ಮಳೆರಾಯ, ರೈತನ ಕಷ್ಟ ಮಾಸುವ ಮೊದಲೇ ನಿನ್ನೆ ಬುಧವಾರ ಬಹುದೊಡ್ಡ ಆಘಾತ ನೀಡಿ ರೈತ ಕುಲಕ್ಕೆ ಮತ್ತೆ ಸಂಕಷ್ಟ ತಂದಿದ್ದಾನೆ.
ಹೌದು.ಹಿರೇಗುಂಜಳ, ಚಿಕ್ಕಗುಂಜಳ,ಬರದ್ವಾಡ,ಭಾಗವಾಡ,ಯರೇಬೂದಿಹಾಳ ಸೇರಿದಂತೆ ಕೆಲ ಹಳ್ಳಿಗಳಲ್ಲಿ ಶೇ.68 ಮಿಲಿ ಮೀಟರ್ ಮಳೆಯಾಗಿದ್ದು, ರೈತಾಪಿ ಮುಂಗಾರು ಬೆಳೆ ಹತ್ತಿ, ಹೆಸರು, ಜೋಳ, ಮೆಣಸಿನಕಾಯಿ, ಉದ್ದು, ಸೋಯಾಬೀನ್ ಸೇರಿ ಹಲವಾರು ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ಈಗಾಗಲೇ 72 ಗಂಟೆ ಒಳಗಾಗಿ ಬೆಳೆ ಹಾನಿಯಾದ ರೈತರಿಗೆ ಬೆಳೆ ಪರಿಹಾರಕ್ಕೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ತಂಡೋಪ ತಂಡವಾಗಿ ರೈತರು ಕೃಷಿ ಇಲಾಖೆ`ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
`
ಮಳೆ ಪ್ರವಾಹದ ಕುರಿತಂತೆ ಸಂಬಂಧಪಟ್ಟ ಸಹಾಯಕ ಕೃಷಿ ನಿರ್ದೇಶಕರು ಬೆಳೆ ಸಮೀಕ್ಷೆ ಕೈಗೊಳ್ಳಲು ಸೂಚಿಸಿದ್ದು, ಬೆಳೆ ಹಾನಿಯಾದ ಅರ್ಹ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ.
ಇನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳ ಬೆಳೆ ಸಮೀಕ್ಷೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸರ್ವೇ ಅನ್ವಯ ಬೆಳೆ ಸಮೀಕ್ಷೆ ಕೈಗೊಂಡು ರೈತರಿಗೆ ಪರಿಹಾರ ನೀಡುವುದಾಗಿ ತಹಶೀಲ್ದಾರ ಹೇಳಿದ್ದು, ಮಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ತಹಶೀಲ್ದಾರ ಕಚೇರಿ ಅಧಿಕಾರಿಗಳ ಜಂಟಿ ಸಭೆ ಕರೆದಿದ್ದಾರೆ.
ಒಟ್ಟಾರೆ ಮಹಾ ಮಳೆಗೆ ಕುಂದಗೋಳ ತಾಲೂಕಿನ ರೈತಾಪಿ ಜನರ ಬದುಕು ಅಕ್ಷರಶಃ ನಲುಗಿ ಹೋಗಿದ್ದು, ಇದೀಗ ನಿನ್ನೆ ಸುರಿದ ದಾಖಲೆಯ 68 ಮಿಲಿ ಮೀಟರ್ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
05/08/2022 06:37 pm