ಕುಂದಗೋಳ: ತಾಲೂಕಿನ ಎಲ್ಲೆಡೆ ರೈತಾಪಿ ಜನರು ಮುಂಗಾರು ಹಂಗಾಮನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಅದರಂತೆ ಬಿತ್ತನೆಗಾಗಿ ಈಗಾಗಲೇ ರಂಟೆ-ಕುಂಟೆ ಹೊಡೆದು ಭೂಮಿಯನ್ನು ಹದಗೊಳಿಸಿದ್ದಾರೆ.
ಹೌದು! ಈ ಬಾರಿ ಕುಂದಗೋಳ ತಾಲೂಕಿನಲ್ಲಿ ಒಟ್ಟು 41,900 ಹೆಕ್ಟೇರ್ ಭೂ ಪ್ರದೇಶ ಬಿತ್ತನೆಯ ಗುರಿ ಹೊಂದಿದ್ದು ಅದರಲ್ಲಿ ಪ್ರಮುಖವಾಗಿ 17,900 ಹೆಕ್ಟೇರ್ ಭೂಮಿಯಲ್ಲಿ ಮುಂಗಾರು ಹತ್ತಿ, 17,000 ಹೆಕ್ಟೇರ್ ಶೇಂಗಾ, 3600 ಹೆಕ್ಟೇರ್ ದ್ವಿದಳ ಧಾನ್ಯ ಹೆಸರು, ಉದ್ದು, 3300 ಹೆಕ್ಟೇರ್ ಗೋವಿನಜೋಳ ಹಾಗೂ ಇತರೆ ಬೆಳೆ ಬೆಳೆಯಲಿದ್ದಾರೆ.
ಈಗಾಗಲೇ ಸಂಪೂರ್ಣ ಭೂಮಿಯನ್ನು ಹರಗಿ ಕಟ್ಟಿಗೆ ಕಸ ಆಯ್ದು ಸ್ವಚ್ಚಗೊಳಸಿದ ರೈತರು ಬೀಜ ಹಾಗೂ ಅದಕ್ಕೆ ಪೂರಕವಾದ ಗೊಬ್ಬರ ಪಡೆಯಲು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು ರೈತರು ಬೀಜ ಗೊಬ್ಬರ ಪಡೆಯಲು ಸಹಾಯಕ ಕೃಷಿ ನಿರ್ದೇಶಕರು ನೀಡಿದ ಮಾಹಿತಿ ಇಲ್ಲಿದೆ.
ಕೆಂಪು ಸುಂದರಿ ಮೆಣಸಿನಕಾಯಿ ಬೆಳೆಯಲ್ಲಿ ಪ್ರಾಮುಖ್ಯತೆ ಸಾಧಿಸಿದ ಕುಂದಗೋಳ ತಾಲೂಕಿನಲ್ಲಿ ಅಕಾಲಿಕ ಮಳೆ ಅತಿವೃಷ್ಟಿ ಕಾರಣ ಈ ಬಾರಿ ರೈತರು ಅತಿ ಕಡಿಮೆ ಪ್ರಮಾಣದಲ್ಲಿ ಕೇವಲ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುವ ಮುನ್ಸೂಚನೆ ಕಂಡು ಬರುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
27/05/2022 07:17 pm