ಕುಂದಗೋಳ : ಅಕಾಲಿಕ ಮಳೆಗೆ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಅಗತ್ಯ ದಾಖಲಾತಿ ಕೊಡಲು ಸೂಚಿಸಿದ ತಾಲೂಕು ಆಡಳಿತ ಅದರ ಜೊತೆ ಜಂಟಿ ಖಾತೆ ಇದ್ದಲ್ಲಿ ಹಣ ಪಡೆಯಲು ಬಾಂಡ್ ಪೆಪರ್ ನೋಟರಿ ಪತ್ರ ಕಡ್ಡಾಯ ಮಾಡಿ ರೈತರಿಗೆ ಉರಿ ಬಿಸಿಲಲ್ಲಿ ನಿಂತು ಬಾಂಡ್ ಪೆಪರ್ ತರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಅಕಾಲಿಕ ಮಳೆ ಹಾನಿ ಪರಿಹಾರ ಪಡೆದ ರೈತರ, ಹಣ ಹಂಚಿಕೆ ತಂಟೆ ಮರಳಿ ಇಲಾಖೆ ಮೆಟ್ಟಿಲು ತಲುಪದೇ ಇರಲಿ ಎಂಬ ಕಾರಣಕ್ಕೆ ತಾಲೂಕು ಆಡಳಿತ ಕರಾರು ಒಪ್ಪಿಗೆ ಪತ್ರ ಪಡೆಯುತ್ತಿರುವ ವಿಚಾರ ಸರಿ.
ಆದ್ರೇ, ಇದೇ ರೈತರು ತಮ್ಮ ತಮ್ಮ ಜಂಟಿ ಖಾತೆ ಹಂಚಿಕೆಗೆ ಕೊಟ್ಟ ಅರ್ಜಿ ವಿಲೇವಾರಿ ಮಾಡದೆ ಕೂತ ತಹಶೀಲ್ದಾರ ಕಚೇರಿ ಭೂ ಮಾಪನ ಇಲಾಖೆ ಈಗ ಸರ್ಕಾರ ಕೊಡೊ ಪರಿಹಾರಕ್ಕೆ ಒಪ್ಪಿಗೆ ಪತ್ರ ಪಡೆಯುತ್ತಿರುವುದು ಎಷ್ಟು ಸರಿ ಎಂಬುದು ರೈತರ ಪ್ರಶ್ನೆ.
ಭೂ ಮಾಪನ ಇಲಾಖೆಗೆ ಬಂದ ಪೋಡಿ ತಾತ್ಕಾಲ್ ಪೋಡಿ, ಖಾತೆ ಬದಲಾವಣೆ ಅರ್ಜಿ ವಿಲೇವಾರಿ ಆಗಿದ್ರೇ ಇಂದು ರೈತರಿಗೆ ಈ ಪಾಟಿ ಬಿಸಲಲ್ಲಿ ಮಹಿಳೆಯರು, ವೃದ್ಧರು, ಯುವಕರು ನಿಂತು ಬಾಂಡ್ ಪೆಪರ್ ಪಡೆದು ನೋಟರಿ ಮಾಡಿ ಕೊಡುವ ಪ್ರಸಂಗವೇ ಏರ್ಪಡುತ್ತಿರಲಿಲ್ಲ.
ಒಟ್ಟಾರೆ ಕುಂದಗೋಳ ತಹಶೀಲ್ದಾರ ಸಾಹೇಬ್ರೆ ಭೂ ಮಾಪನ ಇಲಾಖೆಯಲ್ಲಿ ವಿಲೇವಾರಿ ಆಗದ 1030 ಅರ್ಜಿ ಮೊದಲು ಬಗೆಹರಿಸಿರಿ.
Kshetra Samachara
26/11/2021 01:57 pm