ಹುಬ್ಬಳ್ಳಿ: ಅನ್ನದಾತನೇ ದೇಶದ ಬೆನ್ನೆಲುಬು ಅಂತ ಬಾಯಿ ಮಾತಿನಲ್ಲಿ ಹೇಳುವ ಸರ್ಕಾರಗಳು ಈಗ ರೈತರ ಅಳಲನ್ನು ಕೇಳುವಲ್ಲಿ ವಿಫಲವಾಗಿವೆ. ಒಂದಾದ ಮೇಲೊಂದರಂತೆ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುವ ರೈತನ ಕಣ್ಣಿರು ಒರೆಸುವವರು ಯಾರು..? ಎಂಬುವಂತ ಪ್ರಶ್ನೆ ಎದುರಾಗಿದೆ.
ಮಳೆಯಿಲ್ಲದೇ ಬೆಳೆದ ಬೆಳೆಗಳು ಕೈ ಸೇರುತ್ತಿಲ್ಲ. ಅಲ್ಲದೇ ಬೆಳೆ ವಿಮೆ ತುಂಬಿದ ರೈತರಿಗೆ ಸರಿಯಾದ ಸಮಯಕ್ಕೆ ಬೆಳೆ ವಿಮೆ ಕೂಡ ಸಿಗುತ್ತಿಲ್ಲ. ಇನ್ನೂ ಸರ್ಕಾರಗಳು ಬೆಳೆ ವಿಮೆ ಕಂಪನಿಗಳ ಪರ ನಿಂತಿವೆ ಎಂಬುವಂತ ಮಾತುಗಳು ರೈತ ವಲಯದಿಂದ ಕೇಳಿ ಬರುತ್ತಿವೆ.ಇದರಿಂದ ಬೆಳೆ ವಿಮೆ ತುಂಬಿದ ರೈತ ಅತಂತ್ರನಾಗಿದ್ದಾನೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಂದ ಬೆಳೆ ಹಾನಿ, ಇನ್ನೊಂದು ಕಡೆ ಮಳೆ ಇಲ್ಲದೆ ಒಣಗಿದ ಬೆಳೆಗಳು. ಇದರಿಂದ ದಿಕ್ಕು ದೋಚದಂತಾದ ಅನ್ನದಾತನ ಬದುಕು ನಿಜಕ್ಕೂ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಇಷ್ಟೇಲ್ಲಾ ಆದರೂ ಬೆಳೆ ವಿಮೆ ಮಾತ್ರ ರೈತನ ಕೈ ಸೇರಿಲ್ಲ. ವಿಮೆ ನೀಡುವಲ್ಲಿ ಬೆಳೆವಿಮೆ ಕಂಪನಿಗಳು ಹಿಂದೇಟು ಹಾಕುತ್ತಿವೆ ಇದರಿಂದ ರೈತ ಕಣ್ಣೀರು ಹಾಕುವಂತಾಗಿದೆ.
ಬೆಳೆ ವಿಮೆ ನೀಡಿ ರೈತನ ಕಣ್ಣಿರು ಒರೆಸುವಂತೆ ಅನ್ನದಾತ ಒತ್ತಾಯಿಸುತ್ತಿದ್ದಾನೆ. ಒಂದಿಲ್ಲ ಒಂದು ರೀತಿಯಲ್ಲಿ ಪೆಟ್ಟು ತಿನ್ನುತ್ತಿರುವ ಅನ್ನದಾತನ ಬದುಕನ್ನು ಹಸನಾಗಿಸಲು ಮನಸ್ಸು ಮಾಡಬೇಕಿದೆ ಸರ್ಕಾರ, ರೈತನಿಗೆ ನೀಡಬೇಕಿದೆ ಬೆಳೆ ವಿಮೆ ಹಣ ಎಂಬುವುದು ನಮ್ಮ ಆಶಯ.
Kshetra Samachara
11/11/2021 02:20 pm