ಧಾರವಾಡ : ಜಿಲ್ಲೆಯಲ್ಲಿ ಹಿರಿಯ ನಾಯಕರಿದ್ದಾರೆ. ಪಶುವೈದ್ಯರು ಮತ್ತು ಸಿಬ್ಬಂದಿ ಸಮಸ್ಯೆಯನ್ನು ಆಲಿಸಲು ನಾನು ಸದಾ ಸಿದ್ಧ ನಿಮ್ಮ ಸಮಸ್ಯೆಗಳಿದ್ದರೆ ನನಗೆ ತಿಳಿಸಿ ಆದರೆ ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವ ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಪಶುಸಂಗೋಪನೆ, ವಕ್ಫ್ ಹಾಗೂ ಹಜ್ ಸಚಿವರಾದ ಪ್ರಭು ಚವ್ಹಾಣ ಹೇಳಿದರು.
ಬುಧವಾರ ನಗರದ ರಾಯಾಪುರದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲೆಯ ಇಲಾಖಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯು ಕೃಷಿ ಪೂರಕ ಚಟುವಟಿಕೆಗಳು,ಹೈನುಗಾರಿಕೆ ಮೂಲಕ ಉತ್ಪಾದನೆ ಚಟುವಟಿಕೆಗಳನ್ನು ಹೆಚ್ಚಿಸಲು ವಿಪುಲ ಅವಕಾಶ ಹೊಂದಿರುವ ಇಲಾಖೆಯಾಗಿದೆ.ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಈ ನಿಟ್ಟಿನಲ್ಲಿ ಪ್ರತಿನಿತ್ಯ ಖುದ್ದಾಗಿ ವಾಟ್ಸಪ್ ಮೂಲಕ ತಮಗೆ ಮಾಹಿತಿ ಸಲ್ಲಿಸಬೇಕು ಹಾಗೂ ಜಿಲ್ಲೆಯ ಎಲ್ಲ ರೈತರಿಗೆ ಈ ಯೋಜನೆಯ ಅನುಕೂಲ ಆಗಬೇಕು, ಕರೆ ಮಾಡಿದ ತಕ್ಷಣ ಸ್ಪಂದಿಸಿ,ಎಂದು ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಈ ವೇಳೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಇದ್ದರು.
Kshetra Samachara
19/11/2020 07:48 pm