ಹುಬ್ಬಳ್ಳಿ : ನಗರದ ಸುನಿಧಿ ಕಲಾಸೌರಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದಿ. 27 ಹಾಗೂ 28 ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರವನ್ನು ಅಮರಗೋಳ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ಕಾರ್ಯಾಗಾರ ಮುಂಜಾನೆ 11 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ.
ದಿ. 27 ರಂದು ಮುಂಜಾನೆ 11 ಕ್ಕೆ ರಾಜ್ಯ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ ಕಾರ್ಯಾಗಾರ ಉದ್ಘಾಟಿಸುವರು. ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅಧ್ಯಕ್ಷತೆ ವಹಿಸುವರು.
ಕಿಮ್ಸ್ ಚಿಕ್ಕಮಕ್ಕಳ ತಜ್ಞ ಡಾ: ಗೋಪಾಲಕೃಷ್ಣ ಮಿತ್ರಾ ಮುಖ್ಯ ಅತಿಥಿ. ಶಾಲೆ ಪ್ರಧಾನ ಗುರುಗಳಾದ ಬಿ.ವಿ ಬಮ್ಮನವಾಡಿ ಉಪಸ್ಥಿತರಿರುವರು. ಸಿಕಂದರ ದಂಡಿನ್ ಕಾರ್ಯಾಗಾರ ನಿರ್ವಹಿಸುವರು. ಸರ್ವರೂ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದು ಕಾರ್ಯಾಗಾರದ ಸಂಚಾಲಕಿ ಶ್ರೀಮತಿ ವೀಣಾ ಅಠವಲೆ ಕೋರಿದ್ದಾರೆ.
Kshetra Samachara
27/02/2021 08:30 am