ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸೌಹಾರ್ದತೆ ಹೋಳಿ ಆಚರಣೆಗೆ ಸಾಕ್ಷಿ ಆಯ್ತ ಕಮರಿಪೇಟೆ-ಮುಗಿಲು ಮುಟ್ಟಿದ ಸಂಭ್ರಮಾಚರಣೆ

ವರದಿ:ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

ಹುಬ್ಬಳ್ಳಿ: ಅದು ಹುಬ್ಬಳ್ಳಿಯ ಪ್ರತಿಷ್ಠಿತ ನಗರ. ಆ ನಗರಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಈ ನಗರದ ಹೆಸರು ಕೇಳಿದರೆ ಸಾಕು ಎಂತಹವರ ಕಿವಿ ಕೂಡ ನೆಟ್ಟಗಾಗಿ ಬಿಡುತ್ತದೆ. ಅಂತಹ ಪ್ರತಿಷ್ಠಿತ ನಗರದಲ್ಲಿ ರಂಗಪಂಚಮಿ ಆಚರಣೆ ವೈಭವದ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.

ಹೀಗೆ ಹಿರಿಯರು,ಕಿರಿಯರು ಎನ್ನದೇ ಪರಸ್ಪರ ಬಣ್ಣ ಹಚ್ಚುತ್ತಿರುವ ಜನರು. ಜಾತಿ,ಮತ, ಬೇಧವನ್ನು ಬದಿಗಿಟ್ಟು ಆಚರಣೆಯಲ್ಲಿ ನಿರತರಾದ ಸಹೃದಯಿ ಸ್ನೇಹಿತರು. ಇದೆಲ್ಲದಕ್ಕೂ ಸಾಕ್ಷಿ ಆಗಿರೋದು ಹುಬ್ಬಳ್ಳಿಯ ಕಮರಿಪೇಟೆ. ಹೌದು. ಹುಬ್ಬಳ್ಳಿಯ ಕಮರಿಪೇಟೆಯ ಕಾಮಣ್ಣನ ಆಚರಣೆ ಅಂದರೇ ಅದಕ್ಕೆ ತನ್ನದೆ ಆದ ಮಹತ್ವ ಇದೆ.

ಇಲ್ಲಿನ ಕಾಮಣ್ಣನ ದರ್ಶನ ಪಡೆದುಕೊಳ್ಳಲು ನಾಡಿನ ವಿವಿಧಕಡೆಯಿಂದಲೂ ಭಕ್ತರು ಬರುತ್ತಾರೆ. ಇಂತಹ ನಗರದಲ್ಲಿ ರಂಗಪಂಚಮಿ ಪ್ರಯುಕ್ತವಾಗಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಲಾಯಿತು. ಮಕ್ಕಳು, ಮಹಿಳೆಯರು, ಹಿರಿಯರು, ಯುವಕರು ಎಲ್ಲರೂ ಒಟ್ಟಾಗಿ ಪಾಲ್ಗೊಂಡು ಹೋಳಿ ಹಬ್ಬಕ್ಕೆ ಹೊಸ ಮೆರಗು ನೀಡಿದ್ದಾರೆ.

ಎಲ್ಲೆಡೆಯೂ ಬಣ್ಣ ಬಣ್ಣದ ಚಿತ್ತಾರಗಳು, ಪರಸ್ಪರ ಹರ್ಷವನ್ನು ಹಂಚಿಕೊಂಡು ಬಣ್ಣ ಎರಚುತ್ತಿರುವ ಪುಟ್ಟ ಪುಟ್ಟ ಕೈಗಳು. ನಿಜ, ಇದನ್ನ ನೋಡೋದೇ ಒಂದು ಖುಷಿ. ಆದರೆ, ಕಿಲ್ಲರ್ ಕೊರೊನಾ ಹಾವಳಿಯಿಂದ ಆಚರಣೆಗೆ ಬ್ರೇಕ್ ಬಿದ್ದಿತ್ತು. ಈಗ ಬಣ್ಣದ ಹಬ್ಬಕ್ಕೆ ಕೊರೊನಾ ಕರಿನೆರಳು ದೂರ ಸರಿದಿದ್ದು, ಎಲ್ಲೆಡೆಯೂ ಹರ್ಷದ ಹೊನಲು ಮೂಡಿದೆ.

ಒಟ್ಟಿನಲ್ಲಿ ಎಲ್ಲೆಡೆಯೂ ಸಂಭ್ರಮ ಮನೆ ಮಾಡಿದೆ. ಜಾತಿ,ಮತ, ಧರ್ಮದ ಬೇಧವನ್ನು ಮರೆತು ಇಲ್ಲಿ

ಹೋಳಿ ಹಬ್ಬ ಆಚರಣೆ ಮಾಡಿರುವುದು ವಿಶೇಷವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/03/2022 04:26 pm

Cinque Terre

81.46 K

Cinque Terre

6

ಸಂಬಂಧಿತ ಸುದ್ದಿ