ಹುಬ್ಬಳ್ಳಿ:ಪುನೀತ್ ರಾಜ್‌ಕುಮಾರ್ ನಿಧನರಾಗಿ ಸುಮಾರು ದಿನಗಳೇ ಕಳೆದರೂ ಹುಬ್ಬಳ್ಳಿಯ ಜನರಲ್ಲಿ ಮಾತ್ರ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ರಂಗಪಂಚಮಿ ಆಚರಣೆಯಲ್ಲಿಯೂ ಕೂಡ ಪುನೀತ್ ರಾಜಕುಮಾರ್ ನೆನೆದು ಅಭಿಮಾನಿಗಳು ವಿಶೇಷವಾಗಿ ಗೌರವ ಸಮರ್ಪಣೆ ಮಾಡಿದರು.
ಹೌದು !ಪುನೀತ್ ಅಭಿನಯದ ರಾಜಕುಮಾರ ಚಿತ್ರದ 'ಗೊಂಬೆ ಹೇಳುತೈತೆ, ಮತ್ತೇ ಹೇಳುತೈತೆ ನೀನೇ ರಾಜಕುಮಾರ' ಹಾಡಿಗೆ ಅಪ್ಪು ಭಾವಚಿತ್ರ ಹಿಡಿದುಕೊಂಡು, ಡ್ಯಾನ್ಸ್ ಮಾಡುವ ಮೂಲಕ ವಿನೂತನವಾಗಿ ಹೋಳಿ ಆಚರಣೆ ಮಾಡಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಪುನೀತ್ ರಾಜಕುಮಾರ್ ಅವರ ಹಾಡಿಗೆ ಸಖತ್ ಸ್ಟೆಪ್ ಹಾಕಿ ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
Kshetra Samachara
22/03/2022 03:00 pm