ಹುಬ್ಬಳ್ಳಿ: ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರ ಆಶ್ರಯದಲ್ಲಿ ಹಾಗೂ ಕೆನರಾ ಬ್ಯಾಂಕ್ ಸಹಕಾರದೊಂದಿಗೆ ಜೈಂಟ್ಸ್ ಸಪ್ತಾಹ ಆಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅದ್ಧೂರಿಯಾಗಿ ನೆರವೇರಿತು.
ಹೌದು... ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರದ ನೂತನ ಅಧ್ಯಕ್ಷರಾಗಿ ಡಾ. ಮನೋಜ್ ಭಟ್ ಅಧಿಕಾರ ಸ್ವೀಕರಿಸಿದ್ದು, ನೂತನ ಅಧ್ಯಕ್ಷರ ಪದಗ್ರಹಣ ವಿಜೃಂಭಣೆಯಿಂದ ಜರುಗಿತು. ಮಾತ್ರವಲ್ಲದೆ, ನೂತನ ಅಧ್ಯಕ್ಷರಿಗೆ ಅದ್ಧೂರಿಯಾಗಿ ಸನ್ಮಾನಿಸಿ, ಅಭಿನಂದನೆ ಕೂಡ ಸಲ್ಲಿಸಲಾಯಿತು. ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಮನೋಜ್ ಭಟ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಕೇಳಿ...
ಇನ್ನು, ನೂತನ ಅಧ್ಯಕ್ಷರಾಗಿ ಡಾ. ಮನೋಜ್ ಭಟ್, ಕಾರ್ಯದರ್ಶಿಯಾಗಿ ವಸಂತ್ ನಾಯ್ಕ್ ಮತ್ತು ಖಜಾಂಚಿಯಾಗಿ ಅಂಬೇಶ ಊಟವಾಲೆ ಮತ್ತಿತರ ಪದಾಧಿಕಾರಿಗಳು ಅಧಿಕಾರ ಗ್ರಹಣ ಮಾಡಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಈಗಾಗಲೇ ಕೆನರಾ ಬ್ಯಾಂಕ್ ಸಾಕಷ್ಟು ಸಹಕಾರ ನೀಡಿರುವುದನ್ನು ಕೂಡ ಸ್ಮರಿಸಿರುವುದು ವಿಶೇಷವಾಗಿದೆ.
ಜೈಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷರಾದ ಜಿ.ಎಸ್. ನಾಯಕ್, ಜೈಂಟ್ಸ್ ಫೆಡರೇಶನ್ ಅಧ್ಯಕ್ಷರಾದ ತಾರಾದೇವಿ ವಾಲಿ, ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರ ಮಾಜಿ ಅಧ್ಯಕ್ಷರಾದ ವಾಸುದೇವ ಮಹಾಲೆ ಮುಂತಾದವರು ಆಗಮಿಸಿದ್ದು, ಚಂದ್ರಶೇಖರ ಭೂಯಾರ ಹಾಗೂ ಪ್ರವೀಣ ಮುತಾಲಿಕ್ ಉಪಸ್ಥಿತರಿದ್ದರು.
Kshetra Samachara
18/09/2022 01:34 pm