ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾರ್ಥ್ ಕರ್ನಾಟಕ ಐಡಲ್ ಗ್ರ್ಯಾಂಡ್ ಫಿನಾಲೆ: ಗಾಯಕ ರಾಜೇಶ್ ಕೃಷ್ಣನ್ ರಿಂದ ಸಮಾಜ ಸೇವಕನಿಗೆ ಸನ್ಮಾನ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವಾದ್ಯ ವೃಂದ ಕಲಾವಿದರ ಸಂಘದ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಾರ್ಥ್ ಕರ್ನಾಟಕ ಐಡಲ್ ಗ್ರ್ಯಾಂಡ್ ಫಿನಾಲೆಗೆ ಖ್ಯಾತ ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಡಾ.ವಿ.ಎಸ್.ವಿ ಪ್ರಸಾದ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಹೌದು..ಹುಬ್ಬಳ್ಳಿಯ ಬೆಂಗೇರಿಯ ಸಂತೆ ಮಾರುಕಟ್ಟೆ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಪ್ರತಿಭೆಗಳು ಸೂಕ್ತ ವೇದಿಕೆಯಿಲ್ಲದೇ ಎಲೆ ಮರೆಯ ಕಾಯಿಯಂತೆ ತೆರೆಯ ಹಿಂದೆಯೇ ಉಳಿದುಕೊಂಡಿವೆ. ಆದರೆ ಧಾರವಾಡ ಜಿಲ್ಲಾ ವಾದ್ಯ ವೃಂದ ಕಲಾವಿದರ ಸಂಘ ಇಂತಹ ಪ್ರತಿಭೆಗಳಿಗೆ ಪೂರಕವಾದ ವೇದಿಕೆಯನ್ನು ಕಲ್ಪಿಸುವ ಮೂೇಲಕ ಕಲಾ ಪ್ರೋತ್ಸಾಹಕ್ಕೆ ಒತ್ತು ನೀಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಇಂತಹ ಪ್ರಯೋಗಗಳು ಸಾಕಷ್ಟು ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೂ ಕಾರ್ಯಕ್ರಮಕ್ಕೆ ಆಗಮಿಸಿದ ಖ್ಯಾತ ಸಂಗೀತಗಾರರಾದ ರಾಜೇಶ ಕೃಷ್ಣನ್, ಡಾ.ವಿ.ಎಸ್.ವಿ ಪ್ರಸಾದ್ ಅವರಿಗೆ ಸನ್ಮಾನಿಸಿ ವಿ.ಎಸ್.ವಿ ಪ್ರಸಾದ ಅವರ ಸಾಮಾಜಿಕ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಇಂತಹ ಪ್ರೋತ್ಸಾಹಕರು ಇರುವುದರಿಂದಲೇ ಇನ್ನೂ ಕೂಡ ಕಲೆಗೆ ಬೆಲೆ ಸಿಗುತ್ತಿರುವುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಡಾ‌.ವಿ.ಎಸ್.ವಿ ಪ್ರಸಾದ ಹಾಗೂ ರಾಜೇಶ್ ಕೃಷ್ಣನ್ ಅವರು ಬಹುಮಾನ ವಿತರಣೆ ಮಾಡಿದರು. ಬಳಿಕ ವೇದಿಕೆಯ ಮೇಲೆ ಆಸೀನರಾಗಿದ್ದ ಎಲ್ಲರಿಗೂ ಗೌರವ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Edited By : Manjunath H D
Kshetra Samachara

Kshetra Samachara

18/07/2022 04:45 pm

Cinque Terre

25.58 K

Cinque Terre

1

ಸಂಬಂಧಿತ ಸುದ್ದಿ