ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರತಿಬಿಂಬ ಕ್ರಿಯೇಷನ್ಸ್ ʼಮಾರಿಗಡʼ ಚಿತ್ರ ಮುಂದಿನ ತಿಂಗಳು ತೆರೆಗೆ

ಹುಬ್ಬಳ್ಳಿ: ಪ್ರತಿಬಿಂಬ ಕ್ರಿಯೇಷನ್ಸ್ ಅಡಿಯಲ್ಲಿ ಮಾರಿಗಡ ಚಲನಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ವಿಶ್ವನಾಥ ಎಂ. ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಯುವ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ಮಾರಿಗಡ ಚಲನಚಿತ್ರದಲ್ಲಿ ಮಾರೇಶ, ಅನನ್ಯ, ರೂಪಾ, ಶಶಿಕುಮಾರ, ಮಹೇಶ, ಅಂಬಿಕಾ ಸೇರಿದಂತೆ ಇತರ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರವು ಯುವಜನರ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳಿಗೆ ಯಾವ ರೀತಿಯಾಗಿ ಸ್ಪಂದಿಸುತ್ತಾರೆಂದು ತೋರಿಸಲಾಗಿದೆ. ದಾಂಡೇಲಿ, ಉಳುವಿ, ಹುಬ್ಬಳ್ಳಿ-ಧಾರವಾಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗಲಿದೆ ಎಂದರು.

ಇನ್ನು, ಮಾರಿಗಡ ಚಿತ್ರದಲ್ಲಿ ಐದು ಹಾಡುಗಳಿವೆ‌. ಸಂಗೀತ ಸಂಯೋಜನೆಯನ್ನು ವಿನಯ ವಿವೇಕ ಮಾಡಿದ್ದಾರೆ. ವಿಜಯ ಪ್ರಕಾಶ, ಅನುರಾಧ ಭಟ್, ಸಂಚಿತ ಹೆಗಡೆ ಹಾಡುಗಳನ್ನು ಹಾಡಿದ್ದಾರೆ. ಹಾಡುಗಳನ್ನು ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Edited By :
Kshetra Samachara

Kshetra Samachara

14/06/2022 02:17 pm

Cinque Terre

93.51 K

Cinque Terre

0

ಸಂಬಂಧಿತ ಸುದ್ದಿ