ಧಾರವಾಡ : ಬಹುನಿರೀಕ್ಷಿತ ಕೋಟಿಗೊಬ್ಬ -3 ಚಿತ್ರ ಇಂದು ತೆರೆ ತೆರೆಕಾಣಬೇಕಾಗಿತ್ತು ಆದರೆ ತಾಂತ್ರಿಕ ದೋಷದಿಂದಾಗಿ ಕೋಟಿಗೊಬ್ಬ-3 ಚಿತ್ರ ಪ್ರಸಾರವಾಗದೆ ಇರುವದರಿಂದ ಕಿಚ್ಚನ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಹೌದು ಇಂದು ಧಾರವಾಡದ ಪದ್ಮಾ ಹಾಗೂ ವಿಜಯ ಚಿತ್ರ ಮಂದಿರದಲ್ಲಿ ಕೋಟಿಗೊಬ್ಬ 3 ಚಿತ್ರ ತೆರೆ ಕಾಣಬೇಕಾಗಿತ್ತು. ಆದರೆ ತಾಂತ್ರಿಕ ದೋಷ ಇಡಿ ರಾಜ್ಯಾಧ್ಯತ ಕಾಡಿದ್ದರಿಂದ ಚಿತ್ರ ತೆರೆಕಾಣುವಲ್ಲಿ ವಿಫಲವಾಗಿದೆ.ಆದರೂ ಅಭಿಮಾನ ವ್ಯಕ್ತ ಪಡಿಸುತ್ತಿರುವ ಕಿಚ್ಚನ ಅಭಿಮಾನಿಗಳು ಈಗಾಗಲೇ ಚಿತ್ರ ಮಂದಿರದ ಎದುರು ನೆರೆದಿದ್ದು ಕಿಚ್ಚನಿಗೆ ಅಭಿಮಾನ ವ್ಯಕ್ತ ಪಡಿಸುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಸರಥಿ ಸಾಲಿನಲ್ಲಿ ನಿಂತು ಟಿಕೆಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳು, ಪಟಾಕಿ ಸಿಡಿಸಿ ಸಂಭ್ರಮ ಮೆರೆಯುತ್ತಿದ್ದಾರೆ ಅಷ್ಟೇ ಅಲ್ಲದೆ ಕಿಚ್ಚನಿಗೆ ಜೈಕಾರ ಕೂಗಿ ಸಂಭ್ರಮ ಆಚರಿಸುತ್ತಿದ್ದಾರೆ.
Kshetra Samachara
14/10/2021 03:25 pm