ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಪಾಲಕರ ಪಾತ್ರ; ಮಹೇಶ ಆಕ್ಸ್‌ಫರ್ಡ್ ಪಿಯು ಕಾಲೇಜಿನಲ್ಲಿ ಸಭೆ

ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವ ಹಾಗೂ ಶೈಕ್ಷಣಿಕ ಬದುಕಿನಲ್ಲಿ ಪಾಲಕರು ನಿರ್ವಹಿಸುವ ಜವಾಬ್ದಾರಿಯನ್ನು ಮನವರಿಕೆ ಮಾಡುವ ಸದುದ್ದೇಶದಿಂದ ಡಾ.ಆರ್.ಬಿ.ಪಾಟೀಲ್ ಮಹೇಶ್ ಆಕ್ಸ್‌ಫರ್ಡ್ ಪಿಯು ಕಾಲೇಜು ಕುಸುಗಲ್ ರೋಡ್ ಶಾಖೆ ಹುಬ್ಬಳ್ಳಿ ವತಿಯಿಂದ ಪಿಯು ಪೋಷಕ ಹಾಗೂ ಶಿಕ್ಷಕರ ಸಭೆಯನ್ನು ನಡೆಸಲಾಯಿತು.

ಸಭೆಯ ನೇತೃತ್ವವನ್ನು ಗೋಕುಲ್ ರೋಡ್ ಶಾಖೆಯ ಪ್ರಾಂಶುಪಾಲರು ಮತ್ತು ಕುಸುಗಲ್ ರಸ್ತೆ ಶಾಖೆಯ ಮಾರ್ಗದರ್ಶಕರಾದ ಶ್ರೀರಾಮ್ ಮೋಹನ್.ಹೆಚ್.ಕೆ ವಹಿಸಿದ್ದರು. ಶೈಕ್ಷಣಿಕ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಮತ್ತು ಮುಂಬರುವ ದಿನಗಳ ಯೋಜನೆಗಳ ಬಗ್ಗೆ ವಿವರಣೆ ‌ನೀಡಿದರು.

ಪ್ರಾಂಶುಪಾಲರಾದ ರವಿರಾಜ್ ಎಸ್ , ಉಪನ್ಯಾಸಕರಾದ ಮುತ್ತಪ್ಪ, ಅನಿಲ್ ಕದಂ, ಸೌಮ್ಯ ಎಸ್, ಮಮತಾ ಕೆ., ಆತ್ಮ ಶಿಂದಗಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಾಜಣ್ಣ ಗುಡಿಮನಿ ಹಾಗೂ ಪಾಲಕರು ಸಭೆಯಲ್ಲಿ ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

01/09/2022 03:40 pm

Cinque Terre

6.69 K

Cinque Terre

0

ಸಂಬಂಧಿತ ಸುದ್ದಿ