ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಜನಸ್ನೇಹಿ ಪೊಲೀಸ್ ಠಾಣೆಯಿಂದ SSLC ವಿದ್ಯಾರ್ಥಿಗಳಿಗೆ ಸನ್ಮಾನ

ಅಣ್ಣಿಗೇರಿ: ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ SSLC ವಿದ್ಯಾರ್ಥಿಗಳಿಗೆ ಜನಸ್ನೇಹಿ ಪೊಲೀಸ್ ಠಾಣೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಠಾಣೆಯಲ್ಲಿ ಜರುಗಿತು

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮುಖಾಂತರ ಹಿರಿಯ ಪೊಲೀಸ್ ಅಧಿಕಾರಿ ಚಂದ್ರಕಾಂತ್ ಪೂಜಾರ ಅವರು ಚಾಲನೆ ನೀಡಿದರು. ಪಟ್ಟಣ ಸೇರಿದಂತೆ ತಾಲೂಕಿನ ಅನುದಾನ ಮತ್ತು ಅನುದಾನರಹಿತ 16 ಶಾಲೆಯ 50 ಮಕ್ಕಳಿಗೆ ಗೌರವ ಪೂರ್ವಕವಾಗಿ ಸನ್ಮಾನ ಮಾಡಲಾಯಿತು.

ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಚಂದ್ರಕಾಂತ ಪೂಜಾರ ಅವರು ಮಾತನಾಡಿ ಇಲ್ಲಿಂದ ಮಕ್ಕಳ ಜವಾಬ್ದಾರಿ ಹೆಚ್ಚು ಆಗುತ್ತದೆ. ಪ್ರತಿ ಹಂತದಲ್ಲೂ ನೀವು ಯಶಸ್ಸನ್ನು ಗಳಿಸುತ್ತಾ ಹೋಗಬೇಕು ನಿಮ್ಮ ಜೊತೆ ನಿಮ್ಮ ಪಾಲಕರ ಸಹಕಾರ ಮುಖ್ಯವಾಗಿರುತ್ತದೆ. ಹಾಗೂ ಸಾಧನೆ ಮಾಡಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಪಿಎಸ್ಐ ಜೂಲಕಟ್ಟಿ ಅವರು ಮಾತನಾಡಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಲೆಯ ಗುರು ಬಳಗಕ್ಕೆ ಧನ್ಯವಾದಗಳು ತಿಳಿಸಿ, ಈಗಿನ ಸಮಯದಲ್ಲಿ ಸೌಕರ್ಯಗಳು ಹೇರಳವಾಗಿವೆ. ಆಗಿನ ಕಾಲದಲ್ಲಿ ಹಳ್ಳಿಗಳಲ್ಲಿ ಪ್ರೌಢಶಾಲೆಗಳು ಇರುತ್ತಿದ್ದಿಲ್ಲ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಸ್ಥಳಕ್ಕೆ ಹೋಗುವ ಪರಿಸ್ಥಿತಿ ಇರುತ್ತಿತ್ತು. ಅಥವಾ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಇರಬೇಕಿತ್ತು.ಆದರೆ ಈಗ ಹಾಗಿಲ್ಲ ಸೌಲಭ್ಯಗಳನ್ನು ಮಕ್ಕಳು ಸದುಪಯೋಗ ಪಡೆದುಕೊಂಡು ಯಶಸ್ವಿ ಆಗಬೇಕು. ಪ್ರತಿಭಾವಂತರನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಅದು ಯಾವುದೇ ಇಲಾಖೆಯ ಇದ್ದರೂ ಸರಿ ಎಂದು ನುಡಿದರು.

Edited By :
Kshetra Samachara

Kshetra Samachara

28/05/2022 06:44 pm

Cinque Terre

15.95 K

Cinque Terre

0

ಸಂಬಂಧಿತ ಸುದ್ದಿ