ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಂದು ವಿಶ್ವ ಭೂ ದಿನ: ಮರಗಳನ್ನು ರಕ್ಷಿಸಿ ಎಂದು ಮನವಿ ಮಾಡಿದ ಪುಟಾಣಿಗಳು

ಧಾರವಾಡ: ಅವರದ್ದು ಇನ್ನೂ ಆಡಿ ನಲಿಯುವ ವಯಸ್ಸು.. ಆದರೆ, ಪರಿಸರದ ಬಗ್ಗೆ ಅವರಿಗಿರುವ ಕಾಳಜಿ ಮೆಚ್ಚುವಂತದ್ದು.

ಹೌದು! ಹೀಗೆ ಕೈಯಲ್ಲಿ ಬೋರ್ಡ್ ಹಿಡಿದುಕೊಂಡು ನಿಂತಿರುವ ಪುಟಾಣಿಗಳು ವಿಶ್ವ ಭೂದಿನದ ಅಂಗವಾಗಿ ಪರಿಸರದ ಬಗ್ಗೆ ತಮಗರಿವಿರುವಷ್ಟು ಜಾಗೃತಿ ಮೂಡಿಸಿದ್ದಾರೆ. ಇಂತದೊಂದು ಅಪರೂಪದ ದೃಶ್ಯ ಕಂಡು ಬಂದದ್ದು ಧಾರವಾಡದಲ್ಲಿ.

ಧಾರವಾಡದ ಯುವ ಡ್ಯಾನ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂದಿನದ ಕಾರ್ಯಕ್ರಮದಲ್ಲಿ ಪುಟಾಣಿಗಳು, ಮರವನ್ನು ರಕ್ಷಿಸಿ, ನೀರನ್ನು ಮಿತವಾಗಿ ಬಳಸಿ ಎಂಬ ಇತ್ಯಾದಿ ಸಂದೇಶಗಳುಳ್ಳ ಬೋರ್ಡ್‌ಗಳನ್ನು ಹಿಡಿದುಕೊಂಡು ಗಮನಸೆಳೆದರು.

ಮರಗಳು ಮನುಕುಲದ ಜೀವರಕ್ಷಕಗಳಾಗಿವೆ. ಅವುಗಳ ರಕ್ಷಣೆ ಅವಶ್ಯಕವಾಗಿದೆ. ಭೂಮಿಯನ್ನು ಪ್ರೀತಿಸುವುದು ಪ್ರತಿಯೊಂದು ಜೀವಿಯ ಆದ್ಯ ಕರ್ತವ್ಯವೂ ಆಗಿದೆ. ಹೀಗಾಗಿ ಪರಿಸರವನ್ನು ಸಂರಕ್ಷಣೆ ಮಾಡಬೇಕು ಎಂಬ ಸಂದೇಶವನ್ನು ಈ ಪುಟಾಣಿಗಳು ಸಾರಿ ಗಮನಸೆಳೆದಿದ್ದಾರೆ. ಅಲ್ಲದೇ ಪರಿಸರ ನಾಶ ಹಾಗೂ ಪರಿಸರದ ಬಗ್ಗೆ ತಮಗಿರುವ ಕಾಳಜಿ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ವಿಶ್ವ ಭೂ ದಿನಾಚರಣೆಗೆ ನಿಜವಾದ ಅರ್ಥ ಕಲ್ಪಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/04/2022 09:16 pm

Cinque Terre

26.36 K

Cinque Terre

0

ಸಂಬಂಧಿತ ಸುದ್ದಿ