ಹುಬ್ಬಳ್ಳಿ: ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡುವ ಮೂಲಕ ಹೆಸರು ಮಾಡಿದ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಈಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಈಗಾಗಲೇ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯಿಂದಲೇ ರೆಕಾರ್ಡ್ ಕ್ರಿಯೇಟ್ ಮಾಡಿರುವ ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಲ್ಲಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಮತ್ತೊಂದು ಮಹತ್ವದ ನಿರ್ಧಾರದ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧಾರ ಮಾಡಿದೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಬೋಧನೆ ಮೂಲಕ JEE, NEET, K-CET, KVPY ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಮೈಲಿಗಲ್ಲನ್ನು ನಿರ್ಮಾಣ ಮಾಡಿರುವ ಹುಬ್ಬಳ್ಳಿಯ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಈಗ ಶಿಕ್ಷಣಕಾಶಿ ಧಾರವಾಡ ಜಿಲ್ಲೆಯಿಂದ ಯಾಲಕ್ಕಿ ಕಂಪಿನ ನಾಡು ಹಾವೇರಿ ಜಿಲ್ಲೆಯ ನವಾಬರ ನಾಡು ಐತಿಹಾಸಿಕ ಕ್ಷೇತ್ರದ ತಾಣವಾಗಿರುವ ಸವಣೂರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಸವಣೂರು ಅಂಜುಮನ್ ಇಸ್ಲಾಂ ಸೊಸೈಟಿಯ ಸಹಯೋಗದೊಂದಿಗೆ ಸವಣೂರಿನಲ್ಲಿ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಸಾಕಷ್ಟು ಸಾಧನೆಯ ಮೂಲಕ ವಿದ್ಯಾರ್ಥಿಗಳ ಹಾಗೂ ಪಾಲಕರ ವಿಶ್ವಾಸಕ್ಕೆ ಪಾತ್ರವಾಗಿರುವ ಶಿಕ್ಷಣ ಸಂಸ್ಥೆ ಹಾವೇರಿ ಜಿಲ್ಲೆಯನ್ನು ಎಜುಕೇಷನ್ ಹಬ್ ಮಾಡುವ ಮಹತ್ವದ ಕನಸನ್ನು ಹೊತ್ತು ಮುನ್ನಡೆಯುತ್ತಿದೆ.
ಅಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಶೈಕ್ಷಣಿಕ ಭದ್ರತೆಯನ್ನು ಒದಗಿಸಲು ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಇದೇ ಏಪ್ರಿಲ್ 24ರಂದು ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ 11 ಗಂಟೆ ವರೆಗೆ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಇಂಪಲ್ಸ್ ಗೋಲ್ಡನ್ ಅವಾರ್ಡ್ ಟೆಸ್ಟ್ ಕೂಡ ಆಯೋಜಿಸಲಾಗಿದೆ. ಈ ಕುರಿತು ಏಪ್ರಿಲ್ 21,22 ಮತ್ತು 23ರಂದು ತರಬೇತಿಯನ್ನು ನೀಡಲಾಗುತ್ತದೆ. ಆಯ್ಕೆಯಾದ ಮೂವತ್ತು ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕದಲ್ಲಿ ಪ್ರವೇಶವನ್ನು ನೀಡಲಾಗುತ್ತದೆ.
ಇನ್ನೂ ವಿಜ್ಞಾನ ವಿಷಯದ ಕಲಿಕೆಗೆ ಸವಣೂರಿನಿಂದ ವಿದ್ಯಾರ್ಥಿಗಳು ದೂರದ ಊರಿಗೆ ಪ್ರಯಾಣ ಬೆಳೆಸುವಂತಾಗಿದೆ. ಈ ನಿಟ್ಟಿನಲ್ಲಿ ನವಾಬರ ನಾಡು, ಐತಿಹಾಸಿಕ ತಾಣಗಳ ತವರೂರು ಆಗಿರುವ ಸವಣೂರಿನಲ್ಲಿ ನಗರದ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶ ಹಾಗೂ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ ಅಂಜುಮನ್ ಇಸ್ಲಾಂ ಸೊಸೈಟಿ ಮುಂದೆ ಬಂದಿದ್ದು, ಇಂಪಲ್ಸ್ ಕಾಲೇಜಿನ ಕನಸಿನ ಗೋಪುರದ ನಿರ್ಮಾಣಕ್ಕೆ ಕೈ ಜೋಡಿಸಿದೆ. ಅಲ್ಲದೇ ವಿದ್ಯಾರ್ಥಿಗಳ ಸಾಧನೆಯಿಂದಲೇ ತನ್ನ ರೆಕಾರ್ಡ್ ಕ್ರಿಯೇಟ್ ಮಾಡಿರುವ ಇಂಪಲ್ಸ್ ಪಿಯು ಸೈನ್ಸ್ ಕಾಲೇಜು ಈಗ ಗ್ರಾಮೀಣ ಭಾಗದ, ಆರ್ಥಿಕ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣವನ್ನು ಒದಗಿಸುವ ಮಹತ್ವದ ನಿರ್ಧಾರಕ್ಕೆ ಅಂಜುಮನ್ ಇಸ್ಲಾಂ ಸಂಸ್ಥೆ ಮುಂದಾಗಿದೆ. ಅಲ್ಲದೇ ಓದುವ ಆಸಕ್ತ ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸುವ ಪ್ರತಿಜ್ಞೆಯನ್ನು ತೊಟ್ಟು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಧಾರವಾಡದಂತೆ ಹುಬ್ಬಳ್ಳಿಯನ್ನು ಶಿಕ್ಷಣದ ಹಬ್ ಮಾಡುವಂತ ಕಾರ್ಯವನ್ನು ಸಾಕಾರಗೊಳಿಸುತ್ತಿರುವ ಇಂಪಲ್ಸ್ ಕಾಲೇಜು ಈಗ ಯಾಲಕ್ಕಿ ಕಂಪಿನ ಹಾವೇರಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆಯಲಿ. ಸಾಕಷ್ಟು ಸಾಮಾಜಿಕ ಕಾಳಜಿಯನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ಸದುಪಯೋಗವನ್ನು ವಿದ್ಯಾರ್ಥಿಗಳ ಪಡೆದುಕೊಳ್ಳಲಿ ಎಂಬುವುದು ಅಂಜುಮನ್ ಸಂಸ್ಥೆಯ ಆಶಯ.
ಒಟ್ಟಿನಲ್ಲಿ ವಿಜ್ಞಾನ ಶಿಕ್ಷಣದಲ್ಲಿ ಹೆಸರು ಮಾಡಿರುವ ಇಂಪಲ್ಸ್ ಕಾಲೇಜಿನ ನುರಿತ ಬೋಧಕ ಸಿಬ್ಬಂದಿಯ ಬೋಧನೆ, ಛೇರ್ಮನ್ ಮಧುಸೂದನ್ ವಶಿಷ್ಠ ಅವರ ಮಾರ್ಗದರ್ಶನ, ನಿರ್ದೇಶಕರ ನಿರ್ದೇಶನದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 03:38 pm