ಧಾರವಾಡ: ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಪೋಷಕರ ಕುಟುಂಬದ ಸದಸ್ಯರ ಆರೈಕೆಯಲ್ಲಿ ಪಾಲನೆ, ಪೋಷಣೆ ಮತ್ತು ರಕ್ಷಣೆ ಪಡೆಯುತ್ತಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಲ್ಲಿಕಾರ್ಜುನ ಶಿವಯೋಗಿಸ್ವಾಮಿ ಮರಕುಂಬಿಮಠ ಎಂಬ ಬಾಲಕನು ಎಸ್.ಎಸ್.ಎಲ್.ಸಿ ಮುಗಿಸಿ ಐ.ಟಿ.ಐ. ಶಿಕ್ಷಣ ಪಡೆಯುತ್ತಿದ್ದಾನೆ. ಬಾಲಸೇವಾ ಯೋಜನೆಯಡಿ ಲ್ಯಾಪ್‌ಟಾಪ್‌ನ್ನು ಈ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಾಲಾ ಬೈಲೂರ, ರಕ್ಷಣಾಧಿಕಾರಿಗಳಾದ ಅಶ್ವಿನಿ ಉಳ್ಳಿಗೇರಿ, ಪ್ರಕಾಶ ಕೊಡ್ಲಿವಾಡ ಹಾಗೂ ಕಾವ್ಯ ಗಾಳಿ ಇದ್ದರು.
Kshetra Samachara
08/04/2022 10:00 pm