ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕವಿವಿಯಲ್ಲಿ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಮಾನಸೋಲ್ಲಾಸ ಸಭಾಂಗಣದಲ್ಲಿ ಫೆ.21ರಿಂದ 27ರವರೆಗೆ ಭಾರತ ಸರ್ಕಾರದ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ, ಪ್ರಾಂತೀಯ ಎಸ್‌ಎಸ್‌ಎಸ್ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸಿದೆ.

ಈ ಸಮಾರಂಭದ ಉದ್ಘಾಟನೆಯು ಇಂದು (ಸೋಮವಾರ) ಮಧ್ಯಾಹ್ನ 3:00 ಗಂಟೆಗೆ ನಡೆಯಲಿದೆ. ಈ ಶಿಬಿರವನ್ನು ಧಾರವಾಡ ಜಿಲ್ಲಾ ಪಂಚಾಯತಿ ಸಿಇಒ ಡಾ. ಸುರೇಶ ಇಟ್ನಾಳ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರದ ಎನ್.ಎಸ್.ಎಸ್ ಪ್ರಾದೇಶಿಕ ಅಧಿಕಾರಿ ಕೆ.ವಿ.ಖಾದ್ರಿ ನರಸಿಂಹಯ್ಯ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕವಿವಿ ಹಣಕಾಸು ಅಧಿಕಾರಿ ಗೀತಾ ಯರೇಶಿಮೆ ಮತ್ತು ವಿಶೇಷ ಅತಿಥಿಗಳಾಗಿ ಕರ್ನಾಟಕ ರಾಜ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿವಿ ಮೌಲ್ಯಮಾಪನ ಕುಲಸಚಿವರಾದ ಡಾ. ಎಚ್.ನಾಗರಾಜ್ ವಹಿಸಲಿದ್ದಾರೆ.

ಈ ಶಿಬಿರದ ಸಾಂಸ್ಕೃತಿಕ ಮೆರವಣಿಗೆಯು ಕ.ವಿ.ವಿ ಆವರಣದ ವಿದ್ಯಾಸೌಧ, ಮುಖ್ಯ ಕಟ್ಟಡದಿಂದ ಮಾನಸೋಲ್ಲಾಸ ಸಭಾಗೃಹದವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಲಗಳಾದ ಕ.ವಿ.ವಿ ಧಾರವಾಡ, ಮಂಗಳೂರಯ.ವಿ.ವಿ, ಗುಲ್ಬರ್ಗ ವಿ.ವಿ, ದಾವಣಗೆರೆ ಹಾಗೂ ರಾಣಿಚೆನ್ನಮ್ಮ ವಿ.ವಿ ಹಾಗೂ ಇತರೆ ರಾಜ್ಯಗಳಾದ ಗುಜರಾತ, ಒಡಿಸ್ಸಾ, ಮಧ್ಯ ಪ್ರದೇಶ, ತಮಿಳನಾಡು, ಅಸ್ಸಾಂ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರಾಖಂಡ, ಮಹಾರಾಷ್ಟ್ರ ಹಾಗೂ ಗೋವಾ ಸೇರಿ 11 ವಿವಿಧ ವಿಶ್ವವಿದ್ಯಾಲಯದ 210 ಎನ್.ಎಸ್.ಎಸ್. ಸ್ವಯಂ ಸೇವಕರು ಹಾಗೂ 14 ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕೋಶದ ಸಂಯೋಜಕರಾದ ಡಾ. ಎಂ.ಬಿ.ದಳಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

21/02/2022 12:44 pm

Cinque Terre

8.48 K

Cinque Terre

0

ಸಂಬಂಧಿತ ಸುದ್ದಿ