ಕುಂದಗೋಳ : ಫಿಟ್ ಇಂಡಿಯಾ ಸಪ್ತಾಹವನ್ನೂ ಈ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದೇ ಶಾಲಾ ಪ್ರೌಢಶಾಲಾ ಮಕ್ಕಳು ಶೈಕ್ಷಣಿಕ ಪ್ರಗತಿ ಜೊತೆ ದೈಹಿಕವಾಗಿ ಮತ್ತಷ್ಟೂ ಫಿಟ್ ಆಗ್ತಾ ಇದ್ದಾರೆ ಆ ರೀತಿಯಲ್ಲಿ ವಿಧ ವಿಧದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಬಸವೇಶ್ವರ ಪ್ರೌಢ ಶಾಲೆ ಮಕ್ಕಳು ಅಕಾಲಿಕ ಮಳೆ ಪರಿಣಾಮ ಶಾಲಾ ಮೈದಾನ ತಮ್ಮ ಚಟುವಟಿಕೆಗೆ ಲಭ್ಯವಿಲ್ಲವಾದ್ರೂ, ಫಿಟ್ ಇಂಡಿಯಾ ಸಪ್ತಾಹ ಕೈ ಬಿಡದೆ ಶಾಲಾ ಆವರಣದಲ್ಲಿಯೇ ನೃತ್ಯ ಹಾಡುಗಳ ಫಿಟ್ ಇಂಡಿಯಾ ಚಟುವಟಿಕೆ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ.
ಈ ಮಕ್ಕಳಿಗೆ ಶಾಲಾ ದೈಹಿಕ ಶಿಕ್ಷಕ ಎಫ್.ಎಚ್.ಅಂಗಡಿ ತರಭೇತಿ ನೀಡಿದ್ದೂ, ಮಕ್ಕಳ ನೃತ್ಯ ಫಿಟ್ ಇಂಡಿಯಾ ಚಟುವಟಿಕೆಗಳನ್ನು ಶಾಲಾ ಶಿಕ್ಷಕರು ಮುಖ್ಯೋಪಾಧ್ಯಾಯರು ಪಾಲಕರು ವೀಕ್ಷಿಸಿ ಸಂತಸ ಪಟ್ಟಿದ್ದಾರೆ.
Kshetra Samachara
04/12/2021 02:59 pm